ಕಾಂಗ್ರೆಸ್ ಪಕ್ಷದ 10 ಶಾಸಕರು ಶೀಘ್ರವೇ ಬಿಜೆಪಿಗೆ: ಸಚಿವ ಅಶೋಕ್

ಬೆಂಗಳೂರು: ಕಾಂಗ್ರೆಸ್ ಪಕ್ಷದ 10 ಶಾಸಕರು ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರುತ್ತಾರೆ ಎಂದು ಕಾಂಗ್ರೆಸ್ಸಿಗರಲ್ಲಿ ಭಯ ಶುರುವಾಗಿದೆ. ಅವರದು ಸತ್ಯವಂತರ ಪಕ್ಷವಾಗಿದ್ದರೆ ತಮ್ಮ ಶಾಕರು ಬೇರೆ ಪಕ್ಷಕ್ಕೆ ಏಕೆ ಹೋಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ಕಾಂಗ್ರೆಸ್ ಶಾಸಕರನ್ನು ತಾಕತ್ತಿದ್ದರೆ ಉಳಿಸಿಕೊಳ್ಳಲಿ ಎಂದಿದ್ದಾರೆ.