ಸ್ಮಾರ್ಟ್‌ಫೋನ್ ವ್ಯಸನ ತಗ್ಗಿಸಲು ಪೋಷಕರಿಂದ ಮಹತ್ವದ ನಿರ್ಧಾರ

ಲೋಕಲ್ ಸರ್ಕಲ್ಸ್ ಹೆಸರಿನ ಸಾಮಾಜಿಕ ಮಾಧ್ಯಮ ಕಮ್ಯುನಿಟಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಪೋಷಕರು ತಮ್ಮ ಮಕ್ಕಳು ಮೊಬೈಲ್‌ಗೆ ದಾಸರಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಮೊಬೈಲ್ ಬಳಸಿ ತಮ್ಮ ಮಕ್ಕಳು ಏನು ಮಾಡುತ್ತಾರೆ ಎಂಬ ಅರಿವು ನಮಗಿಲ್ಲ. ಆದರೆ ಅವರ ವರ್ತನೆಯಲ್ಲಿ ಬದಲಾವಣೆ ಕಂಡಿದೆ ಎಂದು ಪೋಷಕರು ಹೇಳಿದ್ದಾರೆ. ಮಕ್ಕಳ ವರ್ತನೆಯಲ್ಲಿ ಆಗಿರುವ ಬದಲಾವಣೆ ಗುರುತಿಸಿರುವ ಪೋಷಕರು & ಶಿಕ್ಷಕರು ಶಾಲಾ ಆಡಳಿತ ಮಂಡಳಿಗಳ ನೆರವಿನಿಂದ ಇದೀಗ ಸುಧಾರಣೆಗೂ ಮುಂದಿನ ಹೆಜ್ಜೆ ಇಟ್ಟಿದ್ದಾರೆ.