ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್​? ಸಾಂಭವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ

ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್​? ಸಾಂಭವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಸಂಪುಟ ರಚನೆಯ ಜತೆಗೆ ಡಿಸಿಎಂ ಆಯ್ಕೆಯ ಕಸರತ್ತು ಶುರುವಾಗಿದೆ.

ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಸಿಎಂ ರಣತಂತ್ರ ಹೆಣೆದಿದ್ದರೂ, ಸಂಪುಟ ರಚನೆ ಸಂಪೂರ್ಣ ಹೈಕಮಾಂಡ್ ಅಣತಿಯಂತೆ ನಡೆಯಲಿದೆ ಎನ್ನಲಾಗಿದೆ. ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ನಿನ್ನೆಯಿಂದ ಮೂಲ ಮಾಜಿ ಸಚಿವರಗಿಂತ ವಲಸಿಗ ಮಾಜಿ ಸಚಿವರೇ ಮಾಜಿ ಸಿಎಂ ಬಿಎಸ್​ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಾ ಗಿರಿಕಿ ಹೊಡೆಯುತ್ತಿದ್ದಾರೆ. ಇನ್ನು ನಾಲ್ವರು ವಲಸಿಗರನ್ನು ಹಾಗೂ ಸಚಿವರಾಗಿದ್ದ ಮೂಲ ಬಿಜೆಪಿಯ 9 ಮಂದಿಯನ್ನು ಕೈ ಬಿಡುವ ಬಗ್ಗೆ ಚಿಂತನೆ ನಡೆದೆ ಎಂಬ ಮಾಹಿತಿಯೂ ಲಭ್ಯವಾಗಿದೆ

ಸದ್ಯ ಬೊಮ್ಮಾಯಿ ಸಂಪುಟ ಸೇರಲಿರುವ ಸಂಭಾವ್ಯ ಸಚಿವರು ಪಟ್ಟಿ ಇಲ್ಲಿದೆ.

  • ಅಶೋಕ್
  • ಶ್ರೀರಾಮುಲು
  • ಗೋವಿಂದ ಕಾರ್ಜೋಳ
  • ಅರವಿಂದ್ ಲಿಂಬಾವಳಿ
  • ಬಸನಗೌಡಪಾಟೀಲ್ ಯತ್ನಾಳ್
  • ಅರವಿಂದ್ ಬೆಲ್ಲದ್
  • ಪೂರ್ಣಿಮಾ ಶ್ರೀನಿವಾಸ್
  • ಸಿಪಿಯೋಗೇಶ್ವರ್
  • ಉಮೇಶ್ ಕತ್ತಿ
  • ಆನಂದ್ ಸಿಂಗ್
  • ಮಾಧುಸ್ವಾಮಿ
  • ಸುರೇಶ್ ಕುಮಾರ್
  • ಅಶ್ವಥ್ ನಾರಾಯಣ
  • ಮುರುಗೇಶ್ ನಿರಾಣಿ
  • ಸುನಿಲ್ ಕುಮಾರ್
  • ಡಾ.ಕೆ.ಸುಧಾಕರ್
  • ಎಸ್.ಟಿ. ಸೋಮಶೇಖರ್
  • ಎಸ್.ಎಸ್. ಅಂಗಾರ
  • ಚಂದ್ರಪ್ಪ
  • ಪಿರಾಜೀವ್
  • ದತ್ತಾತ್ರೇಯ ಪಾಟೀಲ್ ರೇವೂರ
  • ಕುಮಾರ್ ಬಂಗಾರಪ್ಪ
  • ಬಾಲಚಂದ್ರ ಜಾರಕಿಹೊಳಿ‌
  • ರಾಜುಗೌಡ
  • ಶಿವನಗೌಡನಾಯಕ್

ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಯ್ಕೆಗೆ ಬಿಎಸ್​ವೈ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.