ವ್ಯಕ್ತಿಯ ತಲೆ ಕತ್ತರಿಸಿ ವಿಡಿಯೊ ಪಾಕ್‌ಗೆ ಕಳುಹಿಸಿದ್ದ ಶಂಕಿತ ಉಗ್ರರ ಸೆರೆ !

ನವದೆಹಲಿ: ವ್ಯಕ್ತಿಯ ತಲೆ ಕತ್ತರಿಸಿ, ದೇಹವನ್ನು ತುಂಡು ಮಾಡಿ. ಈ ಭಯಾನಕ ಕೃತ್ಯದ ವಿಡಿಯೊವನ್ನು ಚಿತ್ರೀಕರಿಸಿ ಪಾಕಿಸ್ತಾನದ ತಮ್ಮ ನಿರ್ವಾಹಕನಿಗೆ ಕಳುಹಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಬಂಧಿತರಲ್ಲಿ ಒಬ್ಬನಾದ ನೌಶದ್‌ಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್ ಉಲ್ ಅನ್ಸಾರ್‌ನ ಕಾರ್ಯನಿರ್ವಾಹಕ ಸೊಹೈಲ್ ಎಂಬಾತ ಪ್ರಭಾವಿ ಹಿಂದೂಗಳನ್ನು ಕೊಲ್ಲುವ ಆದೇಶ ನೀಡಿದ್ದ ಎಂದು ವರದಿ ತಿಳಿಸಿದೆ.