ಬಾಗಕೋಟೆಯಲ್ಲಿ ಹೋಳಿ ಹಬ್ಬದ ಮುನ್ನವೇ ಮಾರಾಮಾರಿ: 8 ಜನರಿಗೆ ಗಂಭೀರ ಗಾಯ

ಬಾಗಕೋಟೆಯಲ್ಲಿ ಹೋಳಿ ಹಬ್ಬದ ಮುನ್ನವೇ ಮಾರಾಮಾರಿ: 8 ಜನರಿಗೆ ಗಂಭೀರ ಗಾಯ

ಬಾಗಲಕೋಟೆ: ಇನ್ನೇನು ಹೋಳಿ ಹಬ್ಬ ಹತ್ರ ಬರುತ್ತಿದೆ. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಡಂಗುರ ಸಾರುವುದು ಸಹಜ. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಹಲಗೆ ಬಾರಿಸಬೇಡಿ ಎಂದು ಹೇಳಿದ್ದಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ. ಇದೀಗ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಲಗೆ ಬಾರಿಸುವ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಹಲಗೆ ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಮಾರಾಮಾರಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ಘರ್ಷಣೆಯಲ್ಲಿ ನಾಲ್ವರು ಮಹಿಳೆಯರು, 4 ಯುವಕರು ಗಾಯಗೊಂಡು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಸೇರಿದ್ದಾರೆ.

ಬಸವರಾಜ ಹಾಗೂ ಹನುಮಂತ ಸೇರಿದಂತೆ ಅವರ ಸ್ನೇಹಿತರು ಸೇರಿಕೊಂಡು ತಮ್ಮ ಮನೆ ಮುಂದೆ ಹಲಗೆ ಬಾರಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದಂತಹ ಇನ್ನೊಂದು ಗುಂಪಿನ ಜನರು ಇಲ್ಲಿ ಹಲಗೆ ಬಾರಿಸಬೇಡಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ಆರಂಭವಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ‌. ಘಟನೆಯಲ್ಲಿ ಹನುಮಂತ ಅಂಬಿಗೇರ ಬಸವರಾಜ ಅಂಬಿಗೇರ, ಮಾದೇವಿ ಸವಿತಾ ವಾಲಿಕಾರ್ ಎಂಬುವರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.