ಅಲ್-ಅಮೀನ್ ವಿದ್ಯಾ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಉಮರ್ ಇಸ್ಮಾಯಿಲ್ ಖಾನ್ ಆಯ್ಕೆ
ಬೆಂಗಳೂರು: ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಅಲ್-ಅಮೀನ್ ಶಿಕ್ಷಣ ಸಮೂಹ ಸಂಸ್ಥೆಯು ಶಿಕ್ಷಣ ಸೇರಿದಂತೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ 55 ವರ್ಷಗಳಿಂದ ಸಕ್ರಿಯವಾಗಿದ್ದು ಸಂಸ್ಥೆಯ ಅಧ್ಯಕ್ಷರಾಗಿ ಉಮರ್ ಇಸ್ಮಾಯಿಲ್ ಖಾನ್ ರವರು ಆಯ್ಕೆಯಾಗಿದ್ದಾರೆ.
ಇವರು ಹಿಂದಿನ ಮುಖ್ಯಸ್ಥರಾದ ಡಾ. ಮುಮ್ತಾಜ್ ಅಹ್ಮದ್ ಖಾನ್ ಸಾಹೇಬ್ ಅವರ ಪುತ್ರರಾಗಿದ್ದಾರೆ.
ಬಿಸಿನೆಸ್ ಮ್ಯಾನೇಜ್ಮೆಂಟ್, ಕಾನೂನು, ಫಾರ್ಮಸಿ, ಇನ್ಫರ್ಮೇಷನ್ ಸೈನ್ಸ್, ನರ್ಸಿಂಗ್, ಡಿಎಡ್ ಸೇರಿದಂತೆ ಹಲವು ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.