ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ,

ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ,
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದರು. ನವೆಂಬರ್ 6ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳ್ತಾ ಹೇಳ್ತಾ ಭಕ್ತರ ಮುಂದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ.

ಬೆಳಗಾವಿ: ಪ್ರವಚನ ಮಾಡುತ್ತಿರುವಾಗಲೇ, ತೀವ್ರ ಹೃದಯಾಘಾತವಾಗಿ ಸ್ವಾಮೀಜಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ನವೆಂಬರ್ 6 ರಂದು ತಮ್ಮದೇ ಹುಟ್ಟುಹಬ್ಬ ಆಚರಿಸಿ, ಆಶೀರ್ವಚನ ನೀಡುತ್ತಿದ್ದರು. ಸಂಗನಬಸವ ಮಹಾಸ್ವಾಮೀಜಿ (53) ಹೃದಯಾಘಾತಕ್ಕೆ ಬಲಿಯಾದವರು. ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದರು. ನವೆಂಬರ್ 6ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳ್ತಾ ಹೇಳ್ತಾ ಭಕ್ತರ ಮುಂದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ. ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ.