ವಿದೇಶದಲ್ಲಿರುವ ಭಾರತೀಯರಿಂದ 2022ರಲ್ಲಿ ಭಾರತಕೆ 100 ಬಿಲಿಯನ್ ಡಾಲರ್
ವಿದೇಶದಲ್ಲಿ ದುಡಿಯುವ ಜನರು ಸ್ವದೇಶದಲ್ಲಿರುವ ತಮ್ಮ ಕುಟುಂಬಕ್ಕೆ ಆಗಾಗ ಹಣ ಕಳಿಸುತ್ತಿರುತ್ತಾರೆ. ಹೀಗೆ ವಿದೇಶದಲ್ಲಿರುವವರಿಂದ ಹಣ ಪಡೆಯುವ ದೇಶಗಳಲ್ಲಿ ಭಾರತ 2022ರಲ್ಲಿ ಆಗ್ರಸ್ಥಾನದಲ್ಲಿದೆ. ಅಲ್ಲದೇ ಈ ಹಣ ವಿದೇಶಿ ವಿನಿಮಯ ಸಂಗ್ರಹದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಗಮನಾರ್ಹ ಸಂಗತಿ ಎಂದರೆ, ಈ ವರ್ಷ ಭಾರತಕ್ಕೆ ವಿದೇಶದಲ್ಲಿರುವ ಭಾರತೀಯರು ಕಳಿಸಿದ ಹಣ ದಾಖಲೆಯ 100 ಶತಕೋಟಿ ಡಾಲರ್ ತಲುಪಿದೆ ಎಂದು ಬುಧವಾರ ಬಿಡುಗಡೆಯಾದ ವಿಶ್ವ ಬ್ಯಾಂಕ್ ವರದಿಯಿಂದ ತಿಳಿದುಬಂದಿದೆ.