ತಮಗೆ ತಾವೇ ನಿರ್ದೇಶನ ಮಾಡಿಕೊಳ್ತಿರೋ ವಿಜಯ್ ಮುಂದೆ ಕನ್ನಡದ ಯಾವ ಸ್ಟಾರ್‌ಗೆ ಚಿತ್ರ ಮಾಡ್ತಾರೆ

ನಟ ದುನಿಯಾ ವಿಜಯ್ ಇಂದು ( ಜನವರಿ 20 ) 49ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಜತೆ ತಮ್ಮ ಅಪ್ಪ ಅಮ್ಮನ ಸಮಾಧಿ ಇರುವ ಸ್ಥಳದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಇಷ್ಟು ವರ್ಷಗಳ ಕಾಲ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ದುನಿಯಾ ವಿಜಯ್ ಈ ಬಾರಿ ಆನೆಕಲ್ ತಾಲೂಕಿನಲ್ಲಿರುವ ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
2004ರಲ್ಲಿ ಬಿಡುಗಡೆಗೊಂಡ ಯೋಗರಾಜ್ ಭಟ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ರಂಗ ಎಸ್‌ಎಸ್‌ಎಲ್‌ಸಿ ಚಿತ್ರದ ಮೂಲಕ ನಟನೆ ಆರಂಭಿಸಿದ ದುನಿಯಾ ವಿಜಯ್ ಹಲವು ಚಿತ್ರಗಳಲ್ಲಿ ಪುಟ್ಟ ಖಳನಟನ ಪಾತ್ರಗಳನ್ನು ನಿರ್ವಹಿಸಿದ ನಂತರ 2007ರಲ್ಲಿ ತೆರೆಕಂಡ ಸೂರಿ ನಿರ್ದೇಶನದ ದುನಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಚಿತ್ರದಲ್ಲೇ ಭರ್ಜರಿ ಜಯ ಸಾಧಿಸಿದ ದುನಿಯಾ ವಿಜಯ್ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಈಗ ತಮ್ಮ ಚಿತ್ರಗಳನ್ನು ತಾವೇ ನಿರ್ದೇಶನ ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಹೌದು, ಸಲಗ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡ ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಗೆಲುವು ಸಾಧಿಸಿದರು. ಹೀಗೆ ಸಲಗ ಯಶಸ್ಸಿನಿಂದ ಭೀಮ ಎಂಬ ಮತ್ತೊಂದು ಚಿತ್ರವನ್ನು ತಮಗೆ ತಾವೇ ನಿರ್ದೇಶನ ಮಾಡಿಕೊಳ್ತಿದ್ದಾರೆ ವಿಜಯ್. ಸದ್ಯ ನಿರ್ದೇಶಕನಾಗಿ ಗೆದ್ದಿರುವ ದುನಿಯಾ ವಿಜಯ್ ಮುಂದಿನ ದಿನಗಳಲ್ಲಿ ಕನ್ನಡದ ಯಾವ ಸ್ಟಾರ್ ನಟನಿಗೆ ಚಿತ್ರವನ್ನು ನಿರ್ದೇಶನ ಮಾಡಬಹುದು ಎಂಬ ಕುತೂಹಲ ಹಾಗೂ ಪ್ರಶ್ನೆ ಹಲವು ಸಿನಿ ರಸಿಕರಲ್ಲಿ ಇತ್ತು. ಇದೇ ಪ್ರಶ್ನೆ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಪಾಲ್ಗೊಂಡ ಪತ್ರಿಕಾಗೋಷ್ಠಿಯಲ್ಲೂ ಸಹ ಕೇಳಿಬಂತು. ದುನಿಯಾ ವಿಜಯ್ ಯಾವ ಸ್ಟಾರ್ ಹೆಸರನ್ನು ಹೇಳಬಹುದು ಎಂಬ ಕುತೂಹಲ ಅಲ್ಲಿ ನೆರೆದಿದ್ದವರಲ್ಲಿ ಇತ್ತು.
ನಿಮ್ಮ ಕಥೆಗೆ ನೀವೇ ನಟನೆ ಮಾಡಿದ್ದಾಯ್ತು, ಇನ್ನು ಮುಂದಿನ ದಿನಗಳಲ್ಲಿ ನಿಮ್ಮ ಕಥೆಯನ್ನು ಬೇರೆ ನಟನಿಗೆ ನಿರ್ದೇಶನ ಮಾಡುವ ಯೋಜನೆ ಇದೆಯಾ, ಆ ರೀತಿಯ ಯೋಜನೆ ಇದ್ದರೆ ಯಾವ ನಟನಿಗೆ ನಿರ್ದೇಶನ ಮಾಡುತ್ತೀರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ದುನಿಯಾ ವಿಜಯ್ "ಸತ್ಯವಾಗಲೂ ಇಲ್ಲ ಬ್ರದರ್ ನನಗೆ. ನೋಡಿ ಇವಾಗ ಭೀಮ ಕಥೆಯನ್ನು ನಾನೇ ಮಾಡಬೇಕು ಎನಿಸಿತು. ಜಡೇಶ್ ಕಥೆ ಕೂಡ ಸಖತ್ತಾಗಿದೆ, ಅದನ್ನು ಅವರೇ ನಿರ್ದೇಶನ ಮಾಡಿದ್ರೆ ಚನ್ನ, ಅದಕ್ಕೆ ಜಡೇಶ್ ನೀವೇ ಮಾಡಿ, ನಾನು ಬಂದು ನೀವು ಹೇಳಿದ್ದನ್ನು ಕೇಳುತ್ತೇನೆ ಎಂದೆ. ನನಗೆ ಸ್ಟ್ರೈಕ್ ಆದರೆ ಮಾತ್ರ ಏನಾದರೂ ಬರೆದು ನಿರ್ದೇಶನ ಮಾಡಲು ಇಷ್ಟ' ಎಂದು ದುನಿಯಾ ವಿಜಯ್ ಹೇಳಿಕೆ ನೀಡಿದರು.
ಭೀಮ ರಿಲೀಸ್ ಯಾವಾಗ?
ಇನ್ನು ಇದೇ ಸಂದರ್ಶನದಲ್ಲಿ ಭೀಮ ಚಿತ್ರದ ಬಿಡುಗಡೆ ಯಾವಾಗ ಎಂಬುದರ ಬಗ್ಗೆ ಸಹ ಮಾತನಾಡಿದ ದುನಿಯಾ ವಿಜಯ್ ಚಿತ್ರದ ಹಾಡುಗಳ ಚಿತ್ರೀಕರಣ ಫೆಬ್ರವರಿ ತಿಂಗಳಿನಿಂದ ಆರಂಭವಾಗಲಿದೆ, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇವೆ ತಡ ಮಾಡುವುದಿಲ್ಲ ಎಂದರು. ಇನ್ನು ಚರಣ್ ರಾಜ್ ಸಂಗೀತ ನಿರ್ದೇಶನದ ಬಗ್ಗೆ ವಿಶೇಷವಾಗಿ ಮಾತನಾಡಿದ ದುನಿಯಾ ವಿಜಯ್ 'ಡೋಂಟ್ ವರಿ ಬೇಬಿ ಚಿನ್ನಮ್ಮ' ಎಂಬ ಹಾಡನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ, ಇದು ಖಂಡಿತ ಹಿಟ್ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೀಮ ಸರ್ ಬಿಡುಗಡೆ
ದುನಿಯಾ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಭೀಮ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿದೆ. ಈ ಟೀಸರ್‌ನಲ್ಲಿ ದುನಿಯಾ ವಿಜಯ್ ಅವರ ಲುಕ್ ಅನಾವರಣಗೊಂಡಿದ್ದು, ಈ ಚಿತ್ರದಲ್ಲೂ ಸಹ ದುನಿಯಾ ವಿಜಯ್ ರೌಡಿಯ ಪಾತ್ರ ನಿರ್ವಹಿಸಿದ್ದಾರೆ. ಈ ಟೀಸರ್ ಅನ್ನು ಹುಟ್ಟುಹಬ್ಬಕ್ಕಾಗಿಯೇ ಚಿತ್ರೀಕರಿಸಿದಂತಿದ್ದು, ನಾನು ಡೋಂಟ್‌ವರಿ ಯಾಕಂದ್ರೆ ನಾನು ಹುಟ್ಟಿದ್ದೇ ಜನವರಿ ಎಂಬ ಡೈಲಾಗ್ ಟೀಸರ್‌ನಲ್ಲಿದೆ.
ಶಿವಣ್ಣನ ಜತೆ ನಟಿಸುವಾಸೆಯಾವ ನಟನಿಗೂ ನಿರ್ದೇಶನ ಮಾಡುವ ಯೋಜನೆ ಇಲ್ಲ ಎಂದಿರುವ ದುನಿಯಾ ವಿಜಯ್ ಈ ಹಿಂದೆ ನಟನೋರ್ವನ ಚಿತ್ರದಲ್ಲಿ ನಟಿಸಲೇಬೇಕು ಎಂದಿದ್ದರು. ಹೌದು, ಶಿವ ರಾಜ್‌ಕುಮಾರ್ ನಟನೆಯ ಚಿತ್ರದಲ್ಲಿ ನಾನು ಖಳನಾಯಕನಾಗಿ ನಟಿಸಬೇಕು ಎಂದು ದುನಿಯಾ ವಿಜಯ್ ಹೇಳಿದ್ದರು. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ ಚಿತ್ರವೊಂದರಲ್ಲಿ ಖಳನಾಯಕನಾಗಿ ನಟಿಸಲು ಮಾತುಕತೆ ನಡೆದಿತ್ತು, ಆದರೆ ಅದು ನೆರವೇರಲಿಲ್ಲ ಎಂದೂ ಸಹ ಹೇಳಿಕೆ ನೀಡಿದ್ದರು.
ಯಾರಿಗೆ ನಿರ್ದೇಶನ ಮಾಡಲು ಇಷ್ಟ?