ಹುಣಸೂರು ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡಗೆ ₹55 ಲಕ್ಷ ದೇಣಿಗೆ

ಹುಣಸೂರು ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡಗೆ ₹55 ಲಕ್ಷ ದೇಣಿಗೆ

ಹುಣಸೂರು (ಮೈಸೂರು ಜಿಲ್ಲೆ): ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರಿದೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಘೋಷಿತ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ ಪುತ್ರ ಜಿ.ಡಿ.ಹರೀಶ್‌ಗೌಡಗೆ ಭರಪೂರ ದೇಣಿಗೆ ನೀಡುತ್ತಿದ್ದಾರೆ.

ಭಾನುವಾರ ನಡೆದ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಹರವೆ ಗ್ರಾಮದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿ ಶ್ರೀಧರ್ ನೇತೃತ್ವದಲ್ಲಿ ಅಭಿಮಾನಿಗಳ ತಂಡ ₹ 25 ಲಕ್ಷ ದೇಣಿಗೆ ನೀಡಿದರೆ, ಚೆಲ್ಲಹಳ್ಳಿಯ ಉದ್ಯಮಿ ಮಂಜು ₹ 30 ಲಕ್ಷದ ಚೆಕ್ ನೀಡಿದರು.