ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಕೊರೊನಾ

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಕೊರೊನಾ
ಕೊರೋನಾ ಸೋಂಕು ರಾಜಕಾರಣಿಗಳನ್ನ ಬಿಡುವ ಹಾಗೇ ಕಾಣ್ತಿಲ್ಲ.‌ ಕೇಂದ್ರ ಸಚಿವರಿಂದ ಹಿಡಿದು, ರಾಜ್ಯದವರlflU ಕೋವಿಡ್ ಪತ್ತೆಯಾಗಿದೆ.

ಈಗ ಈ ಸಾಲಿಗೆ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಹ ಸೇರಿದ್ದು, ಅವರಿಗು ಕೊರೋನಾ ಸೋಂಕು ದೃಢವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೋವಿಡ್ ಗೆ ತುತ್ತಾಗಿರುವುದನ್ನ ಖಚಿತಪಡಿಸಿದ್ದಾರೆ. ನನ್ನಲ್ಲಿ ಕೋವಿಡ್ ದೃಢವಾಗಿದ್ದು, ಲಘು ಲಕ್ಷಣಗಳಿಂದ ಬಳಲುತ್ತಿದ್ದೇನೆ. ಪ್ರಸ್ತುತ ನಾನು ಐಸೋಲೇಷನ್ ನಲ್ಲಿ ಇದ್ದೇನೆ. ನನ್ನ ಸಂಪರ್ಕ ಬಂದವರು ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕ್ಯಾಪ್ಟನ್ ಟ್ವೇಟ್ ಮಾಡಿದ್ದಾರೆ.