ಬೀದರ್‌ನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ ೦.೧೪ ಬಂದ ಕಾರಣ ಶಾಲಾ-ಕಾಲೇಜುಗಳನ್ನು ತೆರೆಯಲು ಗ್ರೀನ್ ಸಿಗ್ನಲ್ | School
ಗಡಿ ಜಿಲ್ಲೆ ಬೀದರ್ನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ0.14 ಬಂದ ಕಾರಣ ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರದಿಂದ ಗ್ರೀನ್ಸಿಗ್ನಲ್ ದೊರೆತ ಕಾರಣ ಶಾಲಾ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆಯು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ 9, 10ನೇ ತರಗತಿ ಹಾಗೂ ಪಿಯು ಕಾಲೇಜು ಪ್ರಾರಂಭಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೀದರ್ನಲ್ಲಿ 166 ಸರ್ಕಾರಿ ಶಾಲೆ, 141 ಸರ್ಕಾರ ಅನುದಾನಿತ ಶಾಲೆ ಹಾಗೂ 276 ಅನುದಾನದ ರಹಿತ ಶಾಲೆಗಳು ಸೇರಿದಂತೆ ಒಟ್ಟು, 583 ಶಾಲೆಗಳಿವೆ. ಒಟ್ಟಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಬರಲು ಉತ್ಸುಕರಾಗಿದ್ದಾರೆ.