ವಿಶ್ವದ ಸುಂದರ ಮಹಿಳೆಯರ ಪಟ್ಟಿ ದೀಪಿಕಾ

ವಿಶ್ವದ ಸುಂದರ ಮಹಿಳೆಯರ ಪಟ್ಟಿ ದೀಪಿಕಾ

ವಿಶ್ವದ ೧೦ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿರುವ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಜೋಡೀ ಕೋಮೆರ್ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ. ಬೆಯೋನ್ಸ್ ಮತ್ತು ಕಿಮ್ ಕಾರ್ದಶಿಯಾನ್ ಕೂಡ ಟಾಪ್ ೧೦ ರಲ್ಲಿ ಸ್ಥಾನ ಪಡೆದಿದ್ದಾರೆ. ದೀಪಿಕಾ ಪಡುಕೋಣೆ ವಿಶ್ವದ ೧೦ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ನಿರ್ಧರಿಸಲು ’ಗೋಲ್ಡನ್ ರೇಶಿಯೊ ಆಫ್ ಬ್ಯೂಟಿ’ ಎಂಬ ಪ್ರಾಚೀನ ಗ್ರೀಕ್ ತಂತ್ರವನ್ನು ಅನ್ವಯಿಸಲು ಇತ್ತೀಚಿನ ಗಣಕೀಕೃತ ಮ್ಯಾಪಿಂಗ್ ತಂತ್ರವನ್ನು ಬಳಸಿರುವ ವಿಜ್ಞಾನಿಗಳು ಘೋಷಿಸಿದ ಪಟ್ಟಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಯುಕೆ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ ಜೂಲಿಯನ್ ಡಿ ಸಿಲ್ವಾ ಅವರು ಇತ್ತೀಚೆಗೆ ನಟಿ ಜೋಡೀ ಕೋಮೆರ್ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಕರೆದರು, ಏಕೆಂದರೆ ಅವರ ಮುಖದ ಅಂಶಗಳು ಪರಿಪೂರ್ಣವಾದ ಅನುಪಾತವನ್ನು ಸಮನಾಗಿರುತ್ತದೆ ಎಂದು ವರದಿಯೊಂದು ತಿಳಿಸಿದೆ. ಝೆಂಡಯಾ ಮತ್ತು ಮಾಡೆಲ್ ಬೆಲ್ಲಾ ಹಡಿದ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದರು.
ಮುಖದ ಎಲ್ಲಾ ಅಂಶಗಳನ್ನು ದೈಹಿಕ ಪರಿಪೂರ್ಣತೆಗಾಗಿ ಅಳೆಯಿದಾಗ ಜೋಡೀ ಕೋಮೆರೆ ಸ್ಪಷ್ಟ ವಿಜೇತರಾಗಿದ್ದರು. ಅವಳ ಮೂಗು ಮತ್ತು ತುಟಿಗಳ ಸ್ಥಾನಕ್ಕಾಗಿ ಅವಳು ೯೮.೭ ಶೇಕಡಾ ಅತ್ಯಧಿಕ ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಝೆಂಡಯಾ (೯೪.೩೭ ಶೇಕಡಾ), ಬೆಲ್ಲಾ ಹಡಿದ್ (೯೪.೩೫ ಶೇಕಡಾ), ಬೆಯೋನ್ಸ್ (೯೨.೪೪ ಶೇಕಡಾ), ಅರಿಯಾನಾ ಗ್ರಾಂಡೆ (೯೧.೮೧ ಶೇಕಡಾ), ಟೇಲರ್ ಸ್ವಿಫ್ಟ್ (೯೧.೬೪ ಶೇಕಡಾ), ಜೋರ್ಡಾನ್ ಡನ್ (ಶೇ. ೯೧.೩೯), ಕಿಮ್ ಕಾರ್ದಶಿಯಾನ್ (ಶೇ. ೯೧.೨೮), ದೀಪಿಕಾ ಪಡುಕೋಣೆ (ಶೇ. ೯೧.೨೨) ಮತ್ತು ಹೋಯೆನ್ ಜಂಗ್ (ಶೇ. ೮೯.೬೩) ರಷ್ಟು ಅಂಕ ಗಳಿಸುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.