ಹೆತ್ತ ಮಗಳಿಗೇ ಆಯಸಿಡ್ ಸುರಿದು ಕೊಂದ ತಂದೆ ತಾಯಿ! ಕಾರಣವೇನು ಗೊತ್ತಾ?

ಲಕ್ನೋ: ಹೆತ್ತು, ಹೊತ್ತು ಸಾಕಿದ ಮಗಳನ್ನೇ ತಂದೆ ತಾಯಿ ಆಯಸಿಡ್ ಸುರಿದು ಕೊಂದಿರುವ (Uttar Pradesh Murder) ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೌಶಾಂಬಿ ಜಿಲ್ಲೆಯ ತೆನ್ ಶಾ ಅಲಮಾಬಾದ್‌ನ ನಿವಾಸಿಯಾಗಿರುವ ನರೇಶ್ ಫೆ.3ರಂದು ತಮ್ಮ ಮಗಳು ನಾಪತ್ತೆಯಾಗಿರುವುದಾಗಿ ಹೇಳಿದ್ದರು.
ಅವರ ಮಗಳ ಮೃತದೇಹ ಅದೇ ಊರಿನ ಪಕ್ಕದಲ್ಲಿರುವ ಕಾಲುವೆಯಲ್ಲಿ ಈ ಮಂಗಳವಾರ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಸತ್ಯಾಂಶ ಹೊರಬಿದ್ದಿದೆ.
ನರೇಶ್‌ನ ಮಗಳು ಹಲವು ಹುಡುಗರ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಳಂತೆ. ಇತ್ತೀಚೆಗೆ ಮಗಳ ಬಳಿ ಇದ್ದ ಗರ್ಭ ಪರೀಕ್ಷೆಯ ಕಿಟ್ ಇರುವುದು ನರೇಶ್ ಮತ್ತು ಆತನ ಪತ್ನಿಗೆ ಸಿಕ್ಕಿದೆ.
ಇದರಿಂದಾಗಿ ಸಿಟ್ಟಿಗೆದ್ದ ದಂಪತಿ ಮಗಳ ದೇಹದ ಮೇಲೆ ಬ್ಯಾಟರಿ ಆಸಿಡ್ ಸುರಿದಿದ್ದಾರೆ. ಅದಕ್ಕೆ ನರೇಶನ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಸಹಾಯ ಮಾಡಿದ್ದಾರೆ. ಮಗಳು ಸತ್ತ ನಂತರ ಆಕೆಯ ದೇಹವನ್ನು ಕಾಲುವೆಗೆ ಎಸೆಯಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.