ರೈಲ್ವೆ ನಿಲ್ದಾಣದ ಮೇಲೆ ದಾಳಿ; 30ಕ್ಕೂ ಹೆಚ್ಚು ಮಂದಿಯ ಅಪಹರಣ!

ರೈಲ್ವೆ ನಿಲ್ದಾಣದ ಮೇಲೆ ದಾಳಿ; 30ಕ್ಕೂ ಹೆಚ್ಚು ಮಂದಿಯ ಅಪಹರಣ!

ನೈಜೀರಿಯಾದ ರೈಲು ನಿಲ್ದಾಣದ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಮೊದಲಿಗೆ ದಾಳಿಕೋರರು ಗುಂಡು ಹಾರಿಸಿದ್ದು, ಅನೇಕ ಜನರು ಗಾಯಗೊಂಡಿದ್ದು, 32 ಜನರನ್ನು ಅಪಹರಿಸಿರುವ ಮಾಹಿತಿ ಲಭ್ಯವಾಗಿದೆ. ನೈಜೀರಿಯಾದ ದಕ್ಷಿಣ ಇಡೊ ರಾಜ್ಯದ ರೈಲು ನಿಲ್ದಾಣದಲ್ಲಿ ಈ ದಾಳಿ ನಡೆದಿದ್ದು, ಎಕೆ-47 ರೈಫಲ್‌ಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.