ರಷ್ಯಾದ ಯುದ್ಧ ವಿಮಾನ ಪತನ, 4 ಮಂದಿ ಸಾವು

ಮಾಸ್ಕೋ.ಅ,18- ರಷ್ಯಾದ ಯುದ್ಧ ವಿಮಾನವೊಂದು ಹಾರಾಟದ ವೇಳೆ ಇಂಜಿನ್ ವೈಫಲ್ಯಗೊಂಡು ಅಜೋವ್ ಸಮುದ್ರ ತೀರದ ವಸತಿ ಪ್ರದೇಶ ಬಳಿ ಪತನಗೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ತರಬೇತಿ ಕಾರ್ಯಾಚರಣೆಗಾಗಿ ಟೇಕ್‍ಆಫ್‍ನ ಸಮಯದಲ್ಲಿ ಅದರ ಎಂಜಿನ್‍ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಎಸ್‍ಯು -34 ಬಾಂಬರ್ ಬಂದರು ನಗರವಾದ ಯೆಸ್ಕ್‍ನಲ್ಲಿ ಪತನಗೊಂಡಿದೆ.
ವಿಮಾನ ಬಂದ ರಭಸಕ್ಕೆ ಭಾರೀ ಬೆಂಕಿಯಿಂದ ತಪ್ಪಿಸಿಕೊಳ್ಳಲು ಆಪಾರ್ಟ್‍ಮೆಂಟ್‍ನ 9 ನೇ ಮಹಡಿಯಿಂದ ಜಿಗಿದ ಮೂವರು ಕಳಗೆ ಬಿದ್ದು ಸಾವನ್ನಪ್ಪಿದರೆ ಮತ್ತೊಬ್ಬ ಬೆಂಕಿಗೆ ಆಹುತಿಯಾಗಿದ್ದಾನೆ. ಇಬ್ಬರು ಪೈಲೆಟ್‍ಗಳು ಸುರಕ್ಷಿತವಾಗಿ ಹೊರಗೆ ಜಿಗಿದಿದ್ದು , ಆದರೆ ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಕನಿಷ್ಠ ನಾಲ್ವರು ನಿವಾಸಿಗಳು ಸಾವನ್ನಪ್ಪಿದ್ದಾರೆ, ಆರು ಮಂದಿ ಕಾಣೆಯಾಗಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ, ಇದರಲ್ಲಿ ಎಂಟು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ 17 ಅಪಾರ್ಟ್‍ಮೆಂಟ್‍ಗಳು ಬೆಂಕಿಯಿಂದ ಪ್ರಭಾವಿತವಾಗಿವೆ ಮತ್ತು 250 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ತಾತ್ಕಾಲಿಕ ವಸತಿಗಳನ್ನು ಒದಗಿಸಲಾಗಿದೆ.
ಯುದ್ದ ವಿಮಾನದಲ್ಲಿದ್ದ ಭಾರಿ ಪ್ರಮಾಣದ ಇಂಧನ ಪತನದ ರಭಸಕ್ಕೆ ಬೆಂಕಿ ಜ್ವಾಲೆ ಹರಡಿದೆ ಅಪಘಾತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾಹಿತಿ ನೀಡಲಾಗಿ, ಸ್ಥಳೀಯ ಗವರ್ನರ್ ಜೊತೆಗೆ ಆರೋಗ್ಯ ಮತ್ತು ತುರ್ತು ಪರಿಸ್ಥಿತಿಗಳ ಪರಾಮರ್ಶೆಗೆ ಸಚಿವರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಸುಮಾರು 90,000 ಜನಸಂಖ್ಯೆಯ ಯೆಸ್ಕ್ ನಗರ ರಷ್ಯಾದ ದೊಡ್ಡ ವಾಯುನೆಲೆಯಾಗಿದೆ.
ದುರಂತದ ನಡೆದ ಹಲವಾರು ಗಂಟೆಗಳ ನಂತರ, ತುರ್ತು ಸೇವೆಗಳು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವೆನಿಯಾಮಿನ್ ಕೊಂಡ್ರಾಟೀವ್ ಅವರು ತಿಳಿಸಿದ್ದಾರೆ.
ರಷ್ಯಾದ ಮೆಸೇಜಿಂಗ್ ಅಪ್ಲಿಕೇಶನ್ ಚಾನೆಲ್‍ಗಳಲ್ಲಿ ಪೋಸ್ಟ ಮಾಡಿದ ಕಣ್ಗಾವಲು ಕ್ಯಾಮ್ ವೀಡಿಯೊಗಳು ವಿಮಾನವು ಸ್ಪೋಟಗೊಳ್ಳುವುದನ್ನು ತೋರಿಸಿದೆ. ಯುದ್ಧವಿಮಾನದ ಶಸ್ತ್ರಾಸ್ತ್ರಗಳು ಸ್ಪೋಟದಿಂದ ಅಪಾರ್ಟ್‍ಮೆಂಟ್ ಕಟ್ಟಡವೊಂದು ಬೆಂಕಿ ಜ್ವಾಲೆ ್ತ ಜೋರಾಗಿ ಉರಿಯುತ್ತಿರುವುದನ್ನು ಇತರ ವೀಡಿಯೊಗಳು ತೋರಿಸಿವೆ.
ಎಸ್‍ಯು -34 ಒಂದು ಸೂಪರ್‍ಸಾನಿಕ್ ಅವಳಿ-ಎಂಜಿನ್ ಬಾಂಬರ್ ಯುದ್ದ ವಮಾನ ಅತ್ಯಾಧುನಿಕ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಅದು ರಷ್ಯಾದ ವಾಯುಪಡೆಯ ಪ್ರಮುಖ ವಾಯು ಶಕ್ತಿಯಾಗಿದೆ.
ಸಿರಿಯಾದಲ್ಲಿನ ಯುದ್ಧ ಮತ್ತು ಉಕ್ರೇನ್‍ನಲ್ಲಿನ ಹೋರಾಟದ ಸಮಯದಲ್ಲಿ ಈ ವಿಮಾನವು ವ್ಯಾಪಕ ಬಳಕೆಯನ್ನು ಕಂಡಿದೆ.