ಬ್ರಿಟನ್‌ನಲ್ಲಿ ಗಾಂಧಿ ಜಯಂತಿ ಆಚರಣೆ

ಲಂಡನ್‌: ಬ್ರಿಟನ್‌ಗೆ ಭಾರತದ ನೂತನ ರಾಯಭಾರಿಯಾಗಿರುವ ವಿಕ್ರಂ ದೊರೈಸ್ವಾಮಿ ಅವರ ನೇತೃತ್ವದಲ್ಲಿ ಇಲ್ಲಿ ಭಾನುವಾರ ಮಹಾತ್ಮ ಗಾಂಧಿ ಅವರ 153ನೇ ಜಯಂತಿ ಆಚರಿಸಲಾಯಿತು.

ತವಿಸ್ಟೋಕ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಕ್ರಂ ಅವರು, 'ಗಾಂಧೀಜಿ ಅವರ ಸರಳ ಜೀವನ, ಅವರು ನೀಡಿರುವ ಸಂದೇಶ ಮತ್ತು ಬದುಕಿನ ಮೌಲ್ಯಗಳು ಎಲ್ಲರಿಗೂ ಮಾದರಿಯಾಗಿವೆ' ಎಂದಿದ್ದಾರೆ.

ಲಂಡನ್‌ನಲ್ಲಿರುವ ಭಾರತೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.