ವಾಹನ ಸವಾರರೇ ಗಮನಿಸಿ : ಬೆಳಗಾವಿಯಲ್ಲಿ 'ಪ್ರಧಾನಿ ಮೋದಿ' ಸಂಚರಿಸುವ ಮಾರ್ಗದಲ್ಲಿ ರಸ್ತೆ ಸಂಚಾರ ನಿಷೇಧ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗಾವಿಗೆ ಆಗಮಿಸಲಿರುವ ಹಿನ್ನೆಲೆ ಮೋದಿ ಸಂಚರಿಸುವ ರಸ್ತೆಯಲ್ಲಿ ವಾಹನ ಸಂಚಾರ ಬದಲಾವಣೆ ಹಾಗೂ ಸಂಚಾರ ನಿಷೇಧಿಸಲಾಗಿದೆ.
ಸೋಮವಾರ ಬೆಳಗ್ಗೆ 8ರಿಂದ ಸಂಜೆ 8 ಗಂಟೆಯ ವರೆಗೆ ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಶನಿ ಮಂದಿರ, ಎಸ್ಬಿಎಂ ರಸ್ತೆ, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.
ಅದೇ ರೀತಿ ನಿಪ್ಪಾಣಿಯಿಂದ ಖಾನಾಪುರ ಹಾಗೂ ಗೋವಾಕ್ಕೆ ತೆರಳುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್ ಮೂಲಕ ಕಾಂಗ್ರೆಸ್ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ತೆರಳಬೇಕು.