ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಸಿಎಂ
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯ ತುಂಬಿ ತುಳುಕುತ್ತಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಾಗಿ ಅರ್ಪಿಸಿದರು. ಕಬಿನಿ ಬಳಿ ಮಾತನಾಡಿ, ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಖುಷಿಯ ವಿಚಾರ. ನಮಗಿಂತ ರೈತರಿಗೆ ಖುಷಿಯಾದರೆ ನಮಗೆ ಸಂತೋಷ. ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾದರಿ ಮಾಡುವ ಪ್ರಸ್ತಾಪ ಹಿಂದಿನಿಂದಲು ಇದೆ. ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಚಿವರಾದ ಗೋವಿಂದ ಕಾರಜೋಳ, ಎಸ್ ಟಿ ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಎನ್ ಮಹೇಶ್ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.