ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯಾದ್ಯಂತ 21 ಪೊಲೀಸ್ ಅಧಿಕಾರಿಗಳ‌ ವರ್ಗಾವಣೆ ಮಾಡಿದ ಸರ್ಕಾರ.

ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯಾದ್ಯಂತ 21 ಪೊಲೀಸ್ ಅಧಿಕಾರಿಗಳ‌ ವರ್ಗಾವಣೆ ಮಾಡಿದ ಸರ್ಕಾರ.

ಬೆಂಗಳೂರು: ರಾಜ್ಯಾದ್ಯಂತ 21 ಜನ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಚುನಾವಣೆ ಹೊಸ್ತಿಲಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದೆ.

ಕಳೆದ‌ ಒಂದು ತಿಂಗಳಲ್ಲಿ ಅನೇಕ ಪೊಲೀಸ್ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದ್ದು ರಾಜ್ಯದ ವಿವಿಧ‌ ಭಾಗಗಳಲ್ಲಿ ವರ್ಗಾವಣೆ ಮಾಡಿ ಆದೇಶಿಲಾಗಿದೆ.

ಚುನಾವಣೆಯನ್ನು ತಲೆಯಲ್ಲಿ ಇಟ್ಟುಕೊಂಡು ಸರ್ಕಾರ ಪೊಲೀಸರ ವರ್ಗಾವಣೆ ಮಾಡುತ್ತಿದೆಯಾ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿದೆ.

ವರ್ಗವಾಗಿರುವ 21 ಪೊಲೀಸರಲ್ಲಿ ಮೈಸೂರಿನ ಚೆಸ್ಕಾಂ ಜಾಗೃತ ದಳದ ವಿನಯ್ ಎಚ್.ಎನ್ ಅವರನ್ನು ಮಂಡ್ಯ ಜಿಲ್ಲೆಯ ಸಂಚಾರ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ. ಐ.ಎಸ್.ಡಿಗೆ ವರ್ಗಾವಣೆ ಆದೇಶದಲ್ಲಿದ್ದ ಈರಪ್ಪ ಸಿದ್ದಪ್ಪ ಗುರುನಾಥ್ ರನ್ನು ತುಮಕೂರು ಸಂಚಾರ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ. ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಎಂ ಪಾಟೀಲ್ ರನ್ನು ಬಳ್ಳಾರಿ ಜಿಲ್ಲೆಯ ಎಪಿಎಂಸಿ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ. ಅದೇ ರೀತಿ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಕುಮಾರ್ ಎಸ್‌ಎಂರನ್ನು ಬೆಂಗಳೂರು ನಗರದ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ. ಇನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶದಲ್ಲಿದ್ದ ಮಹಮ್ಮದ್ ಸಲೀಂ ಎ ಅವರನ್ನು ಐ.ಎಸ್.ಡಿಗೆ ವರ್ಗಾವಣೆ ಮಾಡಲಾಗಿದೆ.

ಈ ಎಲ್ಲಾ 21 ವರ್ಗಾವಣೆಯ ಆದೇಶಗಳನ್ನು ಯಾವುದೇ ರೀತಿಯ ಜಾಯ್ನಿಂಗ್ ಪಿರಿಯಡ್ ನೀಡದೇ, ಇದ್ದ ಕರ್ತವ್ಯದಿಂದ ಬಿಡುಗಡೆ ಮಾಡಿ ತಕ್ಷಣ ವರ್ಗಾವಣೆ ಮಾಡಲಾಗಿದೆ.