ಅಕ್ರಮವಾಗಿ ಸಾಗಿಸುತ್ತಿರುವ 150 ಕ್ವಿಂಟಲ ಪಡಿತರ ಅಕ್ಕಿ ಪೊಲೀಸರು ಜಪ್ತಿ
ಔರಾದ ಪಟ್ಟಣದಿಂದ ನೆರೆಯ ರಾಜ್ಯ ಮಹಾರಾಷ್ಟ್ರ ಮಾರ್ಗವಾಗಿ ಗುಜರಾತಗೆ ಅಕ್ಕಿ ಸಾಗಿಸುತುರುವ ಹಿನ್ನೆಲೆ ಔರಾದ ಪಟ್ಟಣ ನಾರಾಯಣಪುರ ಬಳಿ ತಡೆದು ವಿಚಾರ ನಡೆಸಿದಾಗ ಅಕ್ರಮ ಅಕ್ಕಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಗುಜರಾತಿಗೆ ಅಕ್ಕಿ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಗುಜರಾತ್ ಮೂಲದ ಸಾಜನ್ ಹಾಗೂ ಕೆಸುಬಾಯಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕಿಯ ಅಂದಾಜು ಮೌಲ್ಯ 4ಲಕ್ಷ 5೦ ಸಾವಿರ ರೂಪಾಯಿ ಎನ್ನಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕರಾದ ಬಾಬುರೆಡ್ಡಿ ಅವರ ನಿರ್ದೇಶನದ ಮೇರೆಗೆ ರವಿ ಸೂರ್ಯವಂಶಿ ಹಾಗೂ ಪ್ರೇಮಲತಾ ದೂರಿನ ಮೇರೆಗೆ ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.