ಮುಖ್ಯಮಂತ್ರಿಗಳೇ, ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿ
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಮುಖ್ಯಮಂತ್ರಿಗಳನ್ನು ಹೊಂದಿರುವ ಶಿಗ್ಗಾಂವಿ ಮತಕ್ಷೇತ್ರ ನಾಗರಿಕ ನಿರ್ಲಕ್ಷತೆ ಹೇಳಿ ಮಾಡಿಸಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳು ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ್ ಮಾಧ್ಯಮ ಹೇಳಿಕೆ ನೀಡಿದ್ದು ಮುಖ್ಯಮಂತ್ರಿಗಳು ಬೆಂಗಳೂರು ಬಿಟ್ಟು ಸ್ವ ಕ್ಷೇತ್ರದ ಕಡೆಗೆ ಸ್ವಲ್ಪವಾದರೂ ಗಮನಹರಿಸಬೇಕು ಹಾಗೂ ರಸ್ತೆ ಚರಂಡಿಗಳನ್ನು ಸರಿಪಡಿಸಿ ಜನಗಳಿಗೆ ತೊಂದರೆಯಾಗದಂತೆ ಮಾಡಿಸಬೇಕು. ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದ್ದಾರೆ.