ಗ್ರಾಮ ಪಂಚಾಯ್ತಿಗಳಿಗೆ ಶಕ್ತಿ ನೀಡಿದ್ದೆ ಕಾಂಗ್ರೆಸ್ : ಡಿಕೆಶಿ

ಗ್ರಾಮ ಪಂಚಾಯ್ತಿಗಳಿಗೆ ಶಕ್ತಿ ನೀಡಿದ್ದೆ ಕಾಂಗ್ರೆಸ್ : ಡಿಕೆಶಿ

ಹುಬ್ಬಳ್ಳಿ,  ಗ್ರಾಮ ಪಂಚಾಯ್ತಿಗಳಿಗೆ ಶಕ್ತಿ ನೀಡಿದ್ದೇ ಕಾಂಗ್ರೆಸ್ ಪಕ್ಷ ಇದು ಗ್ರಾಪಂ ಸದಸ್ಯರಿಗೂ ಗೊತ್ತಿದೆ ಹೀಗಾಗಿ ಅವರು ಕಾಂಗ್ರೆಸ್‍ಗೆ ಬೆಂಬಲ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಗಾ ಮೂಲಕ ಗ್ರಾಪಂಗಳಿಗೆ ಕೊಟ್ಯಾಂತರ ರೂ ಹರಿದು ಬರುತ್ತಿದೆ.

ಈ ಮೂಲಕ ಗ್ರಾಮ ಪಂಚಾಯ್ತಿಗಳಿಗೆ ಕಾಂಗ್ರೆಸ್ ಶಕ್ತಿ ನೀಡಿದೆ, ಮೀಸಲಾತಿ ಅನುದಾನ ಹೆಚ್ಚಳ ಮಾಡಿದ್ದು ನಮ್ಮ ಪಕ್ಷ ಇದರ ಅರಿವು ಗ್ರಾಪಂ ಸದಸ್ಯರಿಗೆ ಇದೆ ಎಂದರು.ಬೆಳಗಾವಿಯಲ್ಲಿ ಬಂಡಾಯ ಬುಗಿಲೆದ್ದಿದೆ.

ಬಿಜೆಪಿಯಲ್ಲಿ ಶಿಸ್ತು ಇದ್ದರೆ ಅದು ಎಲ್ಲಿದೆ ಎಂದು ತೋರಿಸಲಿ ಎಂದು ಲಖನ್ ಸ್ಪರ್ಧೆ ವಿಚಾರಕ್ಕೆ ಸಂಬಂಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹಿಂದುಳಿದವರಿಗೆ, ದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ.

ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸಚಿವ ಈಶ್ವರಪ್ಪ ಹಾಕಿರುವ ಸವಾಲಿಗೆ ತಿರುಗೇಟು ನೀಡಿರುವ ಡಿಕೆಶಿ ಎಲ್ಲಿ ಚರ್ಚೆಗೆ ಬರಬೇಕು ನಾನು ಸಿದ್ದವಾಗಿದ್ದೇನೆ. ಅವರೇ ವೇದಿಕೆ ಸಿದ್ದ ಪಡಿಸಲಿ ಎಂದು ಹೇಳಿದರು.
ಬಿಟ್ ಕಾಯಿನ್ ವಿಚಾರ ನಾವು ಕೈ ಬಿಟ್ಟಿಲ್ಲ. ಚುನಾವಣೆ ಮುಗಿಯಲಿ ಎಂದು ತಿಳಿಸಿದರು.