ಹೊರ ರಾಜ್ಯದ ಸರಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಸರಗಳ್ಳತನ ನಡೆಸುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರವು ಯಶಸ್ವಿಯಾಗಿದ್ದಾರೆ.
ಗಡಿ ರಾಜ್ಯಗಳಲ್ಲಿ ಸರಗಳ್ಳತನ ನಡೆಸುತ್ತಿದ್ದ ತಂಡ ಪೋಲೀಸರಿಗೆ ತಲೆ ನೋವಾಗಿತ್ತು. ಈ ನಿಟ್ಟಿನಲ್ಲಿ ಅವರನ್ನು ಖೆಡ್ಡಕ್ಕೆ ಕೆಡವಲು ಪೊಲೀಸ್ ಆಯುಕ್ತ ಲಾಬುರಾಮ್ ಗೋಕುಲ್ ರಸ್ತೆ ಪೊಲೀಸ್ ಇನ್ಸ್ಪೆಕ್ಟರ್ ಕಾಲೀಮಿರ್ಚಿ ನೇತೃತ್ವದ ತಂಡ ರಚನೆ ಮಾಡಿದ್ದರು. ಬೆಳಗಾವಿ ಹಾಗೂ ಮಹಾರಾಷ್ಟ ಪೋಲೀಸರ ನೆರವು ಪಡೆದು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಒಂದು ಕಾರು, 2 ಬೈಕ್ ಹಾಗೂ 150 ಗ್ರಾಮ ಚಿನ್ನ ವಶಪಡಿಸಿಕೊಂಡಿದ್ದಾರೆ.
9 ಲೈವ್ ನ್ಯೂಸ್ ಹುಬ್ಬಳ್ಳಿ