ಕೇಂದ್ರ ಸಚಿವ 'ನಿತಿನ್ ಗಡ್ಕರಿ'ಗೆ ಜೀವ ಬೆದರಿಕೆ

ಕೇಂದ್ರ ಸಚಿವ 'ನಿತಿನ್ ಗಡ್ಕರಿ'ಗೆ ಜೀವ ಬೆದರಿಕೆ

ಇಂದು ಬೆಳಿಗ್ಗೆ 11:30ಕ್ಕೆ ನಾಗ್ಪುರದ ಖಮ್ಲಾ ಪ್ರದೇಶದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕೊಲೆ ಬೆದರಿಕೆ ಕರೆ ಬಂದಿದೆ. ಈ ಫೋನ್ ಕರೆ ಎರಡು ಬಾರಿ ಬಂದಿದ್ದು, ಈ ಬಗ್ಗೆ ಕೇಂದ್ರ ಸಚಿವರ ಕಚೇರಿಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಾಗ್ಪುರ ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿತಿನ್ ಗಡ್ಕರಿ ಕಚೇರಿಯಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ.