ಕರ್ನಾಟದಲ್ಲಿ ಸೆಪ್ಟೆಂಬರ್ 13 ರಿಂದ 6 – 8 ನೇ ತರಗತಿ ಆರಂಭಕ್ಕೆ ತಜ್ಞರ ಸಮಿತಿ ಸಲಹೆ
ಕರ್ನಾಟದಲ್ಲಿ ಸೆಪ್ಟೆಂಬರ್ 13 ರಿಂದ 6 – 8 ನೇ ತರಗತಿ ಆರಂಭಕ್ಕೆ ತಜ್ಞರ ಸಮಿತಿ ಸಲಹೆ
9 ರಿಂದ 12 ನೇ ತರಗತಿಗಳಿಗೆ ನಡೆಯುತ್ತಿರುವ ಆಫ್‌ಲೈನ್ ಶಾಲೆಯ ಪರಿಣಾಮಗಳನ್ನು ಅಧ್ಯಯನ ಮಾಡಲು ಸಮಯಾವಕಾಶ ಬೇಕಾಗಿರುವುದುರಿಂದ ಪ್ರಾಥಮಿಕ ವಿಭಾಗಗಳಿಗೆ ಶಾಲೆಯನ್ನು ಪುನಃ ತೆರೆಯುವ ಮೊದಲು ಮೂರು ವಾರಗಳ ಕಾಲ ಕಾಯಬೇಕು ಎಂದು ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.ಈಗಾಗಲೇ ಆಗಸ್ಟ್ 23 ರಿಂದ 9 ರಿಂದ 12 ರವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ.
ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಅಥವಾ ಆಫ್‌ಲೈನ್ ತರಗತಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಾಥಮಿಕ ವಿಭಾಗಗಳಿಗೆ ದೈಹಿಕ ತರಗತಿಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಆಗಸ್ಟ್ ಅಂತ್ಯದ ವೇಳೆಗೆ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು. ತಜ್ಞರ ಸಮಿತಿ 1 ರಿಂದ 8ನೇ ತರಗತಿ ವರೆಗೆ ಆರಂಭಿಸುವ ಬದಲು ಮೊದಲ ಹಂತದಲ್ಲಿ 6 – 8ನೇ ತರಗತಿ ಆರಂಭಿಸಿ ಹಾಗೂ ನಂತರದಲ್ಲಿ 1 ರಿಂದ 5ನೇ ತರಗತಿ ವರೆಗೆ ಆರಂಭ ಮಾಡುವಂತೆ ಸಲಹೆ ನೀಡಿದೆ.
ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಮಾರ್ಗಸೂಚಿಗಳ ಪ್ರಕಾರ ಶಾಲೆಗಳು ಒಂದು ಸಮಯದಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳಿಗೆ ತರಗತಿಗೆ ಪಾಳಿ ಪದ್ಧತಿಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.