ಗ್ರಾಮೀಣ ಜನತೆಗೆ ಸಿಹಿಸುದ್ದಿ

ಗ್ರಾಮೀಣ ಜನತೆಗೆ ಸಿಹಿಸುದ್ದಿ

ಬೆಂಗಳೂರು: ಗ್ರಾ.ಪಂ. ವ್ಯಾಪ್ತಿಯಲ್ಲಿ ಎಲ್ಲಾ ಪಾವತಿ ಇನ್ಮುಂದೆ ಸುಲಭವಾಗಲಿದ್ದು, ಮನೆ ಬಾಗಿಲಲ್ಲೇ ತೆರಿಗೆ ಪಾವತಿ ಮಾಡಬಹುದು. ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆ ಪಂಚತಂತ್ರ ಮೊಬೈಲ್‌ ಆಪ್‌‌‌ ಸಿದ್ದಪಡಿಸುತ್ತಿದ್ದು, ಶೀಘ್ರ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ. ಜನತೆಗೆ ಗೊಂದಲವಿಲ್ಲದಂತೆ ತೆರಿಗೆ ಪಾವತಿಸಲು ಅನುಕೂಲವಾಗಲಿದ್ದು, ಆನ್ಲೈನ್‌‌ನಲ್ಲಿ ತೆರಿಗೆ ಪಾವತಿಸಬಹುದು. ಡೆಬಿಟ್‌ ಕಾರ್ಡ್‌ ಸ್ವೈಪ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.