ಹುಟ್ದಬ್ಬದ ಸಂಭ್ರಮದಲ್ಲಿ ನಟಿ ಪ್ರೇಮಾ

ಸ್ಯಾಂಡಲ್‍ವುಡ್ ನಟಿ ಪ್ರೇಮಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.. ಪ್ರೇಮಾ ಜನವರಿ 6, 1977ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಕೊಡವ ಜನಾಂಗಕ್ಕೆ ಸೇರಿದ ನೆರವಂಡ ಮನೆತನದವರು. ಅವರ ಪೂರ್ತಿ ಹೆಸರು ನೆರವಂಡ ಚೆಟ್ಟಿಚ ಪ್ರೇಮಾ.
ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯಲ್ಲಿ ಓದಿದ್ದಾರೆ.
1996ರಲ್ಲಿ ಬಿಡುಗಡೆಯಾದ 'ಓಂ' ಚಿತ್ರದಿಂದ ಪ್ರೇಮಾ ಎಂಥ ಪಾತ್ರವನ್ನಾದ್ರೂ ಮಾಡಬಲ್ಲರು ಎಂದು ತೋರಿಸಿಕೊಟ್ಟರು. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಸಾಯಿಕುಮಾರ್, ಮಲಯಾಳಂನ ಮೋಹನ್ ಲಾಲ್ ಅವರೊಡನೆ ನಟಿಸಿರುವ ಪ್ರೇಮಾ 50 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.