ಕೋಳಿ ಸಾಕಾಣೆದಾರನಿಂದ IAS ಅಧಿಕಾರಿಗಳಿಗೆ ಟ್ರೈನಿಂಗ್; ಇದಪ್ಪಾ ಸಕ್ಸಸ್ ಅಂದ್ರೆ

ಕೋಳಿ ಸಾಕಾಣೆದಾರನಿಂದ IAS ಅಧಿಕಾರಿಗಳಿಗೆ ಟ್ರೈನಿಂಗ್; ಇದಪ್ಪಾ ಸಕ್ಸಸ್ ಅಂದ್ರೆ
ಕೆಲವೊಮ್ಮೆ ಈ ಜೀವನದಲ್ಲಿನ ಅನುಭವದಿಂದ ಕಲಿತ ಪಾಠ (Life Lessons) ಯಾವುದೇ ದೊಡ್ಡ ವಿಶ್ವವಿದ್ಯಾಲಯದಲ್ಲಿ (University) ಪದವಿ ಮಾಡಿದರೂ ಸಿಕ್ಕಿರುವುದಿಲ್ಲ ಅಂತ ಹೇಳಬಹುದು. ಹೀಗೆ ತಮ್ಮ ವ್ಯವಹಾರದ ಅನುಭವದ ಪಾಠವನ್ನು ಹಂಚಿಕೊಳ್ಳಿ ಅಂತ ಇಲ್ಲೊಬ್ಬ ಕೋಳಿ ಸಾಕಣೆದಾರರನ್ನು (Poultry Farmer) ಐಎಎಸ್ ತರಬೇತಿದಾರರಿಗೆ (IAS Training) ಮಾರ್ಗದರ್ಶನ ಮಾಡಲು ಆಹ್ವಾನಿಸಿದ್ದಾರೆ ನೋಡಿ.
ಹೌದು.. ಅಮರಾವತಿಯ ಕೋಳಿ ಸಾಕಾಣಿಕೆದಾರ ರವೀಂದ್ರ ಮೆಟ್ಕರ್ ಅವರು ಮಾರ್ಚ್ 7 ರಂದು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನಲ್ಲಿ 2022 ರ ಬ್ಯಾಚ್ ನ 189 ಐಎಎಸ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರಂತೆ.

ಯಾರಿವರು ಕೋಳಿ ಸಾಕಣೆದಾರ ರವೀಂದ್ರ ಮೆಟ್ಕರ್?

ಸುಮಾರು ನಾಲ್ಕು ದಶಕಗಳ ಹಿಂದೆ ಮೆಟ್ಕರ್ ಅಮರಾವತಿಯ ಅಂಜನಗಾಂವ್ ನಲ್ಲಿರುವ ತಮ್ಮ ಸಾಧಾರಣ ಮನೆಯ ಟೆರೇಸ್ ನಲ್ಲಿ ಕೇವಲ 100 ಕೋಳಿಗಳೊಂದಿಗೆ ತಮ್ಮದೆ ಆದ ಒಂದು ಫಾರ್ಮ್ ಅನ್ನು ಪ್ರಾರಂಭಿಸಿದ್ದರು. ಅವರು ಈಗ 50 ಎಕರೆ ಕೋಳಿ ಫಾರ್ಮ್ ಅನ್ನು ಹೊಂದಿದ್ದು, ಪ್ರತಿದಿನ 1.20 ಲಕ್ಷ ಮೊಟ್ಟೆಗಳನ್ನು ಉತ್ಪಾದಿಸುವ ಸುಮಾರು ಎರಡು ಲಕ್ಷ ಕೋಳಿಗಳನ್ನು ಹೊಂದಿದ್ದಾರೆ.ಮೆಟ್ಕರ್ ತಮ್ಮ ಜಮೀನಿನಲ್ಲಿ 42 ಎಕರೆ ಭೂಮಿಯಲ್ಲಿ ಹಣ್ಣುಗಳು ಮತ್ತು ಇತರೆ ಬೆಳೆಗಳಾದ ಸಿಟ್ರಸ್, ಚಿಕ್ಕು, ತೆಂಗು, ಮೆಕ್ಕೆಜೋಳ, ಗೋಧಿಯನ್ನು ಸಹ ಬೆಳೆಯುತ್ತಾರೆ. ಅಕಾಡೆಮಿಯಲ್ಲಿ ಕೃಷಿ ಮಾಡ್ಯೂಲ್ ಅಡಿಯಲ್ಲಿ 'ಕಿಸಾನ್ ಸಂವಾದ್: ಲರ್ನಿಂಗ್ ಫ್ರಾಮ್ ಪ್ರೋಗ್ರೆಸಿವ್ ಫಾರ್ಮರ್' ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಲಿದ್ದಾರೆ.

ತಮ್ಮ ರೈತ ಪದ್ದತಿಗಳಿಗಾಗಿ ಪ್ರಶಸ್ತಿಗಳನ್ನು ಪಡೆದ ಮೆಟ್ಕರ್

ಮೆಟ್ಕರ್ ಅವರು 2020, 2021 ಮತ್ತು 2022 ರಲ್ಲಿ ತಮ್ಮ ಅತ್ಯುತ್ತಮ ಅಭ್ಯಾಸಗಳಿಗಾಗಿ ಐಸಿಎಆರ್ ನಿಂದ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪಂಜಾಬ್ ದೇಶಮುಖ್ ಕೃಷಿ ವಿದ್ಯಾಪೀಠ ಅಕೋಲಾದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಕಾಡೆಮಿಗೆ ಆಹ್ವಾನಿಸಲ್ಪಟ್ಟ ಮಹಾರಾಷ್ಟ್ರದ ಮೊದಲ ರೈತ ಕೂಡ ಆಗಿದ್ದಾರೆ ಮೆಟ್ಕರ್.

"ನಾನು 100 ರಿಂದ 2 ಲಕ್ಷ ಕೋಳಿಗಳು ಮತ್ತು 50 ಎಕರೆಗೆ ಹೇಗೆ ಪ್ರಗತಿ ಸಾಧಿಸಿದೆ ಎಂಬುದನ್ನು ವಿವರಿಸುತ್ತೇನೆ. ಸರ್ಕಾರಿ ಅಧಿಕಾರಿಗಳಿಂದ ರೈತರು ಏನನ್ನು ನಿರೀಕ್ಷಿಸುತ್ತಾರೆ ಮತ್ತು ಅವರು ನಮ್ಮನ್ನು ಹೇಗೆ ಬೆಂಬಲಿಸಬಹುದು ಎಂದು ನಾನು ಅವರಿಗೆ ಹೇಳುತ್ತೇನೆ" ಎಂದು ಅವರು ತಾವು ನೀಡಲಿರುವ ಉಪನ್ಯಾಸದ ಕುರಿತು ಹೇಳಿದ್ದಾರೆ.ಕೋಳಿ ಸಾಕಾಣಿಕೆ ಶುರು ಮಾಡಿದ್ದರ ಬಗ್ಗೆ ಏನಂತಾರೆ ಗೊತ್ತೇ?

ಪ್ರಶಸ್ತಿ ವಿಜೇತ ರೈತ, ಕೇವಲ ಹದಿನಾರು ವರ್ಷ ವಯಸ್ಸಿನವರಾಗಿದ್ದಾಗ ಈ ಸಾಕಾಣಿಕೆಯ ವೃತ್ತಿಯಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ ಈ ಕುರಿತು ಮಾತನಾಡುತ್ತ ಅವರು, "ಈ ಪ್ರಯಾಣದಲ್ಲಿ ಹಲವಾರು ಏರಿಳಿತಗಳ ಹೊರತಾಗಿಯೂ ನಾನು ಎಂದಿಗೂ ಹಿಂದೆ ಸರಿಯಲಿಲ್ಲ.

ಸಮಯೋಚಿತ ಹೂಡಿಕೆಗಳು ಮತ್ತು ಸರಿಯಾದ ಕ್ರಮಗಳೊಂದಿಗೆ, ನಾನು 2005 ರ ವೇಳೆಗೆ ನನ್ನ ಫಾರ್ಮ್ ಅನ್ನು ಸ್ಥಾಪಿಸಿದ್ದೆ. 2006 ರಲ್ಲಿ ಹಕ್ಕಿ ಜ್ವರದಿಂದಾಗಿ ನಾನು ತುಂಬಾನೇ ನಷ್ಟವನ್ನು ಅನುಭವಿಸಿದೆ, ಆದರೆ ಹಿಂದಿನ ಉಳಿತಾಯದಿಂದ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಯಿತು. ಈಗ, ನಮ್ಮ ಜಮೀನನ್ನು ನೋಡಿಕೊಳ್ಳಲು ನಾವು 50 ಜನರನ್ನು ನೇಮಿಸಿಕೊಂಡಿದ್ದೇವೆ" ಎಂದು ಅವರು ಹೇಳಿದರು.

UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು 'ಆ' ಘಟನೆ

ಮೆಟ್ಕರ್ ಈಗ ತಮ್ಮ ಕೋಳಿ ಫಾರಂ ಅನ್ನು ಯಾಂತ್ರೀಕೃತಗೊಳಿಸಿದ್ದಾರೆ. ನೂರಾರು ಮೊಟ್ಟೆಗಳನ್ನು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ಸಂಗ್ರಹಿಸುವಂತೆ ಮಾಡಿದ್ದು, ಅಲ್ಲಿ ಜಮೆಯಾಗುವ ತ್ಯಾಜ್ಯವನ್ನು ತೆಗೆದು ಹಾಕುತ್ತಾರೆ ಮತ್ತು ಅದನ್ನು ತಮ್ಮ ಹೊಲಗಳಲ್ಲಿ ಗೊಬ್ಬರವಾಗಿ ಬಳಸುತ್ತಾರೆ.

"ಮಣ್ಣನ್ನು ನೈಸರ್ಗಿಕವಾಗಿ ಫಲವತ್ತಾಗಿಸುವ ಮೂಲಕ ನಾವು ಉತ್ತಮ ಬೆಳೆಯನ್ನು ಪಡೆಯುತ್ತೇವೆ. ಇದು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಮೇಲಿನ ನಮ್ಮ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇಂದು, ಕೋಳಿ ಮೊಟ್ಟೆಗಳಿಂದ ಮಾತ್ರ ನಮ್ಮ ದೈನಂದಿನ ಆದಾಯ 4 ಲಕ್ಷ ರೂಪಾಯಿ ಇದೆ. ಬೆಳೆಗಳು ವಾರ್ಷಿಕವಾಗಿ ಎಕರೆಗೆ 1 ಲಕ್ಷ ರೂಪಾಯಿಗಳ ಇಳುವರಿಯನ್ನು ನೀಡುತ್ತಿವೆ.

50 ಎಕರೆಯಲ್ಲಿ 8 ಎಕರೆ ಕೋಳಿ ಸಾಕಾಣಿಕೆಗೆ ಬಳಸಲಾಗುತ್ತದೆ. ಅವರ ಕಿರಿಯ ಮಗ ಶಿವರಾಜ್ ಬಾರಾಮತಿಯಲ್ಲಿ ಕೃಷಿ ನಿರ್ವಹಣೆಯಲ್ಲಿ ಬಿಎಸ್‌ಸಿ ಪೂರ್ಣಗೊಳಿಸಿದ ನಂತರ ಮೆಟ್ಕರ್ ಅವರ ಜಮೀನಿನಲ್ಲಿ ಸೇರಿಕೊಂಡಿದ್ದಾರೆ. 2022 ರಲ್ಲಿ, ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಸ್ಪೂರ್ತಿದಾಯಕ ಕೆಲಸ ಮಾಡಿದ್ದಕ್ಕಾಗಿ ಮೆಟ್ಕರ್ ಐಸಿಎಆರ್ ನ ಜಗಜೀವನ್ ರಾಮ್ ಅಭಿನವ್ ಕಿಸಾನ್ ಪುರಸ್ಕಾರವನ್ನು ಪಡೆದಿದ್ದಾರೆ.

ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಮಾತ್ರವಲ್ಲದೆ, ಮೆಟ್ಕರ್ ನಿವೃತ್ತ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಮತ್ತು ಸಹ ರೈತರಿಗೆ ಕೃಷಿ ಪದ್ಧತಿಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಯೂಟ್ಯೂಬ್ ವೀಡಿಯೋಗಳು ಸಹ ಈಗ ಲಕ್ಷಾಂತರ ವೀಕ್ಷಣೆಗಳನ್ನು ದಾಟಿದೆ