ಇಷ್ಟು ವಯಸ್ಸಾಗಿದೆ ಏನು ಮಾತಾಡಬೇಕು ಅನ್ನೋ ಬಗ್ಗೆ ಬುದ್ಧಿ ಇಲ್ವಾ? Hamsalekha ಹೇಳಿಕೆಗೆ ಮುತಾಲಿಕ್ ಕಿಡಿ
ನಿಮ್ಮ ಕ್ಷೇತ್ರ ಏನು? ನೀವು ಮಾತನಾಡಿದ ವಿಷಯ ಏನು? ನಿಮ್ಮ ಹೇಳಿಕೆ ನಂತರ ನಿಮ್ಮ ಹೆಂಡತಿ ಬೈದ್ರು ಅಂತಾ ಹೇಳಿದ್ದೀರಿ. ನಿಮ್ಮನ್ನ ಒದ್ದು ಹೊರಗೆ ಹಾಕಬೇಕಿತ್ತು. ಇಷ್ಟು ವಯಸ್ಸಾಗಿದೆ ಏನು ಮಾತಾಡಬೇಕು ಅನ್ನೋ ಬಗ್ಗೆ ಬುದ್ಧಿ ಇಲ್ವಾ? ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ.
ನಿಮ್ಮ ಮನಸ್ಸಲ್ಲಿ ಕಸ, ಕಲ್ಮಶ ತುಂಬಿಕೊಂಡಿದೆ. ಕಸ ತೆಗೆದುಹಾಕಿ ಸ್ವಾಮೀಜಿಗಳ ಕೆಲಸವನ್ನ ಸ್ವಾಗತ ಮಾಡಬೇಕು ಇನ್ನಷ್ಟು ಗೊಂದಲ ಸೃಷ್ಟಿಸುವುದು ಶೋಭಿಸುವಂತದ್ದಲ್ಲ. ಇನ್ನೊಮ್ಮೆ ಈ ರೀತಿ ಹೇಳಿಕೆ ನೀಡಿದ್ರೆ ತಕ್ಕ ಉತ್ತರ ಕೊಡಬೇಕಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ಸಂದೇಶ ರವಾನಿಸಿದರು.
: Hamsalekha ಅವರೇ Muslim ಸ್ನೇಹಿತರನ್ನ ಕರೆಸಿ ಹಂದಿಮಾಂಸದ ಊಟ ಹಾಕಿ, ಅವರು ತಿನ್ನುತ್ತಾರಾ ನೋಡಿ: ಪ್ರತಾಪ್ ಸಿಂಹ
ಇದೇ ವೇಳೆ ಕೋಲಾರದಲ್ಲಿ ನಡೆದ ದತ್ತ ಮಾಲಾಧಾರಿಗಳ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿದರು. ಗೋದ್ರಾ ಮಾದರಿಯಲ್ಲಿ ದತ್ತ ಮಾಲಾ ಧಾರಿಗಳ ಮೇಲಾಗುತ್ತಿದ್ದ ದಾಳಿಯನ್ನ ಪೊಲೀಸರು ತಡೆದಿದ್ದರು. 27 ಜನರಿದ್ದ ಮಿನಿ ಬಸ್ ಸುಡಲು ದುಷ್ಕರ್ಮಿಗಳು ಯತ್ನಿಸಿದ್ದರು. ಈ ರೀತಿಯ ಕಿಡಿಗೇಡಿ ಕೆಲಸ ಸಹಿಸಿಕೊಂಡು ಹಿಂದೂ ಸಮಾಜ ಸುಮ್ಮನೆ ಕುಳಿತುಕೊಳ್ಳಲ್ಲ ಎಂದು ಹೇಳಿದರು.
ತ್ರಿಪುರಾದಲ್ಲಾದ ಗಲಾಟೆಗೆ ಕೆಲವರು ಸವಣೂರುನಲ್ಲಿ ಪ್ರತಿಭಟಿಸುತ್ತಾರೆ. ಆಯ್ತು ಪ್ರತಿಭಟನೆ ಮಾಡಿ. ಆದ್ರೆ, RSS ನಾಯಿಗಳಿಗೆ ಗುಂಡು ಹೊಡೀತಿವಿ ಅಂತಾ ಹೇಳಿದ್ದಾರೆ. ಆರ್ ಎಸ್ ಎಸ್ ನಿಮಗೇನು ಮಾಡಿದೆ, ಹಿಂಸೆಯಲ್ಲಿ ಅವರು ತೊಡಗಿಲ್ಲ. ಈ ರೀತಿ ಮಾಡೋದು ನೋಡಿದ್ರೆ, ಕರ್ನಾಟದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದರು.
: ಶ್ರೀ ಕೃಷ್ಣನ ಅಗ್ರಪೂಜೆಗೆ ಶಿಶುಪಾಲನೂ ಹೀಗೆ ವಿರೋಧಿಸಿದ್ದ: Hamsalekha ಹೇಳಿಕೆಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ
ಇಂತಹ ಹೇಳಿಕೆಗಳನ್ನು ನೀಡುವ ಕಿಡಿಗೇಡಿಗಳನ್ನ ಹದ್ದುಬಸ್ತಿನಲ್ಲಿ ಇಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಇಲ್ಲವಾದರೆ ನಾವು ಉತ್ತರ ಕೊಡಬೇಕಾಗುತ್ತದೆ. ನಾವು ತಿರುಗಿ ಉತ್ತರ ಕೊಟ್ಟರೆ ನೀವು ಪಾಕಿಸ್ತಾನದವರೆಗೆ ಓಡಬೇಕಾಗುತ್ತದೆ. ಬಾಯಿ ಮುಚ್ಕೊಂಡು ಹಿಂದೂ ಸಮಾಜವನ್ನ ಗೌರವಿಸಿ ಸಂವಿಧಾನಾತ್ಮಕವಾಗಿರಬೇಕು.
ದತ್ತಮಾಲಾ ಧಾರಿಗಳ ಮೇಲಿನ ಹಲ್ಲೆ ಖಂಡಿಸಿ ನಾಳೆ ಕೋಲಾರ್ ಬಂದ್ ಕರೆ ನೀಡಲಾಗಿದೆ. ನಾಳೆಯ ಕೋಲಾರ ಬಂದ್ ನಲ್ಲಿ ನಾನೂ ಭಾಗಿಯಾಗಲಿದ್ದೇನೆ. ಕೋಲಾರ ಜನರು ಬಂದ್ ಗೆ ಬೆಂಬಲ ನೀಡಬೇಕೆಂದು ಮುತಾಲಿಕ್ ಮನವಿ ಮಾಡಿಕೊಂಡರು.
ದತ್ತ ಮಾಲಾಧಾರಿಗಳ ಮೇಲಿನ ಕಲ್ಲು ತೂರಾಟ ಖಂಡಿಸಿ ನಾಳೆ ಕೋಲಾರ ಬಂದ್ (Koalr Bandh)ಗೆ ಕರೆ ನೀಡಲಾಗಿದೆ. ಕೋಲಾರದ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ (Hindu Organization) ಈ ಕರೆ ನೀಡಲಾಗಿದೆ. ಕಳೆದ ಶನಿವಾರ ಶ್ರೀ ರಾಮ ಸೇನಾ ದತ್ತ ಮಾಲಾಧಾರಿಗಳ (Datta Maladharai) ಮೇಲೆ ಕಲ್ಲು ತೂರಾಟ ನಡೆದಿತ್ತು. ನಾಳೆ ಬಂದ್ ಹಿನ್ನೆಲೆ ಮಹಾತ್ಮ ಗಾಂಧಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ Rally ನಡೆಸಲಾಗುತ್ತದೆ ಎಂದು ಹಿಂದೂಪರ ಸಂಘಟನೆಗಳ ಒಕ್ಕೂಟ ಹೇಳಿದೆ