ಕರ್ನಾಟಕ ಮಾತೆ’ಯ ಅಧಿಕೃತ ಚಿತ್ರ ಪ್ರಕಟ; ಇನ್ಮುಂದೆ ಈ ಚಿತ್ರ ಬಳಕೆ ಕಡ್ಡಾಯ

ಕರ್ನಾಟಕ ಮಾತೆ’ಯ ಅಧಿಕೃತ ಚಿತ್ರ ಪ್ರಕಟ; ಇನ್ಮುಂದೆ ಈ ಚಿತ್ರ ಬಳಕೆ ಕಡ್ಡಾಯ

ರಾಜ್ಯದಲ್ಲಿ ಈಗಾಗಲೇ ಕನ್ನಡ ಮಾತೆಯ, ನಾಡದೇವಿಯ ವಿವಿಧ ಭಾವಚಿತ್ರಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಅಧಿಕೃತವಾದದ್ದು ಅಂತ ಯಾವುದೂ ಇರಲಿಲ್ಲ. ಇದೀಗ ರಾಜ್ಯ ಸರ್ಕಾರದಿಂದ ಅಧಿಕೃತ ಕರ್ನಾಟಕ ಮಾತೆಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಇನ್ಮುಂದೆ ಈ ಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿಯೂ ಬಳಕೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದೆ.