ಬೆಳೆ ವಿಮಾ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಮನವಿ |Shiggaon|

2021-22 ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪಾವತಿಸದ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಶಿಗ್ಗಾಂವಿ ತಾಲ್ಲೂಕಿನ ದುಂಡಸಿ ಹೋಬಳಿ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ವಿಮಾ ಕಂಪನಿಯವರಿಗೂ ಹಾಗೂ ಕೃಷಿ ಅಧಿಕಾರಿಗಳಿಗೂ ಮನವಿ ಹಾಗೂ ತಹಶಿಲ್ದಾರಿಗೂ ಮನವಿ ಸಲ್ಲಿಸಿ ಆಗ್ರಹಿಸಿದರು.ಬೆಳೆ ವಿಮಾ ಹಣವನ್ನು ಕೊಡದೇ ಇದ್ದರೆ ತಡಸ ಹಾನಗಲ್ ಹೆದ್ದಾರಿಯನ್ನು ಸರ್ಕಾರಿ ವಿವಿಧ ಇಲಾಖೆಯ ಕಚೇರಿಗಳನ್ನು ಬಂದ್ ಮಾಡಿ ಉಗ್ರವಾದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ತಾ.ಪ. ಮಾಜಿ ಸದಸ್ಯ ಈಶ್ವರಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಮ್.ಪಾಟೀಲ, ಅರ್ಜಪ್ಪ ಲಮಾಣಿ, ಚನ್ನಪ್ಪ ಬಿಂದ್ಲಿ, ಮುತ್ತಪ್ಪ ಗುಡಗೇರಿ, ವಿರೂಪಾಕ್ಷಪ್ಪ ಪಾಟೀಲ, ಶೇಕರಯ್ಯ ಹಿರೇಮಠ, ಎಸ.ಡಿ.ಪಾಟೀಲ, ಪಕ್ಕೀರೆಡ್ಡಿ ನಡುವಿನಮನಿ, ರಮೇಶ ತಳವಾರ, ಬಸುವರಾಜ ಯಲ್ಲಕ್ಕನವರ, ಗ್ರಾ.ಪಂ.ಅಧ್ಯಕ್ಷ ಈರಣ್ಣ ಮಹಾಜನಶೆಟ್ಟರ್, ರುದ್ರಗೌಡ್ರ ಪಾಟೀಲ, ಬಸನಗೌಡ ಬ್ಯಾಹಟ್ಟಿ, ವಲಿಅಹ್ಮದ ಮತ್ತೆಖಾನ, ಶಿದ್ದರಾಮಗೌಡ ಪಾಟೀಲ, ಧರಣೇಂದ್ರ ಪುಟ್ಟಣ್ಣವರ,ನಾಗರಾಜ ಸುರಗೊಂಡ, ಬಾಬುಸಾಬ ಯಲಿಗಾರ, ಭರಮಪ್ಪ ಸಾತಣ್ಣವರ, ರುದ್ರಪ್ಪ ಕರಡಿ, ಮಹಾದೇವಪ್ಪ ದೇವತಿ, ಸೇರಿದಂತೆ ನೂರಾರು ರೈತ ಸಮುದಾಯವು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದರು.