ನಾಡದ್ರೋಹಿ MESನಿಂದ ಮತ್ತೆ ಗಡಿ ಕ್ಯಾತೆ? ಕನ್ನಡ ರಾಜ್ಯೋತ್ಸವಕ್ಕೆ ಕರಾಳ ದಿನಾಚರಣೆ!

ನಾಡದ್ರೋಹಿ MESನಿಂದ ಮತ್ತೆ ಗಡಿ ಕ್ಯಾತೆ? ಕನ್ನಡ ರಾಜ್ಯೋತ್ಸವಕ್ಕೆ ಕರಾಳ ದಿನಾಚರಣೆ!

ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ ಮತ್ತೆ ಗಡಿ ಕ್ಯಾತೆ ಆರಂಭವಾಗಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಎಂಇಎಸ್‍ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಸಲು ಪ್ಲಾನ್ ಮಾಡಲಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ‌ ದಿನದ ಪೋಸ್ಟ್ ಹಾಕುತ್ತಿದ್ದಾರೆ.ಏಕೀಕರಣ ಯುವ ಸಮಿತಿ ಫೇಸ್‍ಬುಕ್‍ ಪೇಜ್‍ನಲ್ಲಿ ಎಂಇಎಸ್‍ ನಾಡದ್ರೋಹಿಗಳಿಂದ ಪೋಸ್ಟ್‌ ಹಾಕಿದ್ದಾರೆ. ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್‍ಗೆ ತೀರ್ಮಾನಿಸಲಾಗಿದೆ. ನಾಡದ್ರೋಹಿ MES ಮಹಾಮೇಳಾವ್‍ಗೆ ಈಗಿಂದಲೇ ಸಿದ್ಧತೆ ನಡೆಯುತ್ತಿದೆ.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಸಂದರ್ಭದಲ್ಲಿ ಗಡಿ ಖ್ಯಾತೆ ತೆಗೆಯಲು ಎಂಇಎಸ ಪ್ಲಾನ್ ಮಾಡಿಕೊಂಡಿದೆ. ಚುನಾವಣಾ ವರ್ಷ ಆಗಿದ್ದರಿಂದ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಎಂಇಎಸ್ ಹುನ್ನಾರ ನಡೆಸಿದೆ. ಎಂಇಎಸ್‍ನ ಮಾಜಿ ಶಾಸಕ ಮನೋಹರ ಕಿಣೇಕರ್ ನೇತೃತ್ವದಲ್ಲಿ ಮುಖಂಡರಿಂದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.ಕರಾಳ ದಿನಾಚರಣೆ, ಮಹಾಮೇಳಾವ್‍ಗೆ ಈ ಬಾರಿಯಾದರೂ ಬ್ರೇಕ್ ಹಾಕುತ್ತಾ ರಾಜ್ಯ ಬಿಜೆಪಿ ಸರ್ಕಾರ ಅನ್ನೋ ಪ್ರಶ್ನೆ ಮೂಡಿದೆ. ಪ್ರತಿ ವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‍ ಕಾರ್ಯಕರ್ತರು ಪುಂಡಾಟ ನಡೆಸುತ್ತಾರೆ. ಆದರೂ ಸರ್ಕಾರ ನಾಡದ್ರೋಹಿ ಎಂಇಎಸ್‍ ಸಂಘಟನೆಯನ್ನು ಏಕೆ ಬ್ಯಾನ್ ಮಾಡುತ್ತಿಲ್ಲ ಅನ್ನೂ ಪ್ರಶ್ನೆ ಮೂಡಿದೆ. ಗಡಿ, ಭಾಷಾ ವಿಷ ಬೀಜ ಬಿತ್ತುತ್ತಿರುವ ಎಂಇಎಸ್‍ ಪುಂಡರನ್ನು ಗಡಿಪಾರು ಮಾಡಲು ಏಕೆ ಸರ್ಕಾರ ಹಿಂದೇಟು ಹಾಕ್ತಿದೆ ಅಂತಾ