ಅನ್ನಭಾಗ್ಯ ಯೋಜನೆ : ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಅನ್ನಭಾಗ್ಯ ಯೋಜನೆ : ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಧಾರವಾಡ : ಪಡಿತರ ಫಲಾನುಭವಿಗಳಿಗೆ ಫೆಬ್ರವರಿ-2023ನೇ ಮಾಹೆಯಲ್ಲಿ ರಾಷ್ಟೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ.

ಎನ್‍ಎಪ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 7 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ವಿತರಣೆ ಮಾಡದಿದ್ದಲ್ಲಿ ಧಾರವಾಡ ತಾಲ್ಲೂಕು ಆಹಾರ ಶಿರಸ್ತೇದಾರ-ಮೊ.ಸಂ-9845202400, ಧಾರವಾಡ ತಾಲ್ಲೂಕು ಆಹಾರ ನಿರೀಕ್ಷಕರು-ಮೊ.ಸಂ-8310109795, ಅಳ್ನಾವರ ತಾಲ್ಲೂಕು ಆಹಾರ ನಿರೀಕ್ಷಕರು-ಮೊ.ಸಂ-9448221892 ಇವರ ದೂರವಾಣಿಗಳಿಗೆ ದೂರು ಸಲ್ಲಿಸಿದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಧಾರವಾಡ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.