ರಜನೀಕಾಂತ್ ಅಲ್ಲ, ವಿಜಯ್ ತಮಿಳಿನ ಸೂಪರ್ ಸ್ಟಾರ್ ಎಂದ ರಾಜಕಾರಣಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಯಾರೆಂದರೆ ಎಲ್ಲರೂ ಹೇಳುತ್ತಾರೆ ಅದು ರಜನೀಕಾಂತ್ ಎಂದು. ಕರ್ನಾಟಕ ಮೂಲದ ಈ ನಟ ತಮಿಳುನಾಡಿನಲ್ಲಿ ಸೃಷ್ಟಿಸಿರುವ ಅಬ್ಬರ ಸಾಮಾನ್ಯದ್ದಲ್ಲ. ತಮಿಳುನಾಡಿಗೆ ಮಾತ್ರವಲ್ಲ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ರಜನೀಕಾಂತ್.
ಆದರೆ ತಮಿಳುನಾಡಿನ ರಾಜಕಾರಣಿಯೊಬ್ಬ ಇದೀಗ ರಜನೀಕಾಂತ್ ಮೇಲೆ ಹಾಗೂ ರಜನಿಯ ಅಭಿಮಾನಿಗಳ ಮೇಲೆ ಹರಿಹಾಯ್ದಿದ್ದು, ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅಲ್ಲ ವಿಜಯ್ ಎಂದಿದ್ದಾರೆ.
ಆಗಿದ್ದಿಷ್ಟು, ಪತ್ರಕರ್ತನೊಬ್ಬ ರಜನೀಕಾಂತ್ ಅವರನ್ನು ಮಾಜಿ ಸೂಪರ್ ಸ್ಟಾರ್ ಎಂದು ಸಂಭೋಧಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ಕೆಲವು ರಜನೀಕಾಂತ್ ಅಭಿಮಾನಿಗಳು ಪತ್ರಕರ್ತನಿಗೆ ಮುತ್ತಿಗೆ ಹಾಕಿ ಜಗಳ ಮಾಡಿದ್ದರು. ಇದನ್ನು ಖಂಡಿಸಿ ನಾಮ್ ತಮಿಳರ್ ಪಕ್ಷದ ಮುಖಂಡ ಸೀಮನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.