ಐಪಿಎಲ್-2023 'ರಿಷಬ್ ಪಂತ್' ಕಾಣಿಸಿಕೊಳ್ಳಲಿದ್ದಾರೆ ; ಡೆಲ್ಲಿ ಕ್ಯಾಪಿಟಲ್ಸ್ ಕೋಚ್ 'ರಿಕಿ ಪಾಂಟಿಂಗ್' ಮಹತ್ವದ ಹೇಳಿಕೆ

ನವದೆಹಲಿ : ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವ್ರಿಗೆ ಮೊದಲು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತ್ರ ಉತ್ತಮ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಹಿಂದೆ ಐಪಿಎಲ್ 2023ರಿಂದ ರಿಷಬ್ ಪಂತ್ ಹೊರಗುಳಿಯುತ್ತಾರೆ ಎಂದು ವರದಿಯಾಗಿತ್ತು. ಇನ್ನು ಪಂತ್ ಔಟಾದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹೊಸ ನಾಯಕನನ್ನ ಹುಡುಕಬೇಕಾಗುತ್ತದೆ. ಆದ್ರೆ, ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ರಿಷಬ್ ಪಂತ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ರಿಷಬ್ ಪಂತ್ ಐಪಿಎಲ್ 2023ರಲ್ಲಿ ಆಡಲು ಯೋಗ್ಯವಾಗಿಲ್ಲದಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ನ ಡಗೌಟ್ನಲ್ಲಿ ಅವ್ರನ್ನ ನೋಡಲು ಬಯಸುತ್ತೇನೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಐಸಿಸಿ ವಿಮರ್ಶೆಯಲ್ಲಿ ಪಾಂಟಿಂಗ್, 'ನೀವು ಅವರನ್ನ ಬದಲಾಯಿಸಲು ಸಾಧ್ಯವಿಲ್ಲ. ಅಂತಹ ಆಟಗಾರರು ಮರಗಳ ಮೇಲೆ ಬೆಳೆಯುವುದಿಲ್ಲ. ನಾವು ಅದನ್ನ ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ ಮತ್ತು ನಾವು ಬದಲಿ ಬಗ್ಗೆ ಯೋಚಿಸುತ್ತಿದ್ದೇವೆ. ನಮಗೆ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಬೇಕು. ಅವರು ಆಡಲು ಸಂಪೂರ್ಣ ಫಿಟ್ ಆಗದಿದ್ದರೆ ಮತ್ತೊಬ್ಬ ನಾಯಕನ ಅಗತ್ಯವಿದೆ. ಇನ್ನು ಪಂತ್ ನಿಜವಾಗಿಯೂ ದೈಹಿಕವಾಗಿ ಆಡಲು ಸಿದ್ಧರಾಗಿರದಿದ್ರೆ, ಡಗೌಟ್ನಲ್ಲಿ ನಮ್ಮೊಂದಿಗೆ ಅವ್ರನ್ನ ನೋಡಲು ನಾವು ಇಷ್ಟಪಡುತ್ತೇವೆ' ಎಂದಿದ್ದಾರೆ.