ಜಿಂಕೆ ರಕ್ಷಿಸಿದ ಗ್ರಾಮಸ್ಥರು
ಕೆರೆಯಲ್ಲಿ ಮುಳುಗುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಿದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜೇಕನಕಟ್ಟಿ ಗ್ರಾಮದ ಜನರು ಸುದೀರ್ ಲಮಾಣಿ ನೇತೃತ್ವದಲ್ಲಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ರಮೇಶ, ಮಹೇಶ ಗ್ರಾಮ ಪಂಚಾಯತಿ ಸದಸ್ಯರು ಆದ ಸುಧೀರ್ ಲಮಾಣಿ, ಈಸಾಕ ನೀರಲಕಟ್ಟಿ, ಜಾಫರ ವರದಿ, ತೌಶಿಫ, ಅಬ್ದುಲ್ ಮುನಾಫ, ಹಲವರು ಉಪಸ್ಥಿತರಿದ್ದರು.