ಎನ್ ಎಚ್ 4 ರಸ್ತೆ ಬಂದ್ ಮಾಡಿ ಹೋರಾಟ

ಬೆಳಗಾವಿ

ಅಖಂಡ ಕರ್ನಾಟಕ ರೈತ ಸಂಘದಿಂದ ಚನ್ನಮ್ಮನ ಕಿತ್ತೂರು ಕೋಟೆಯಿಂದ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ನಿಮಿತ್ತವಾಗಿ ಬೆಳಗಾವಿಯ ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಾಣೆ ಮಾಡಿ ಎನ್ ಎಚ್ 4 ಅನ್ನು 20 ನಿಮಿಷಗಳ ಕಾಲ ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಮಧ್ಯೆ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು, ನಂತರ ತಹಶೀಲ್ದಾರರು ಬಂದು ರೈತರ ಮನವಿ ಪಡೆದರು. ಪ್ರತಿಭಟನೆಯಲ್ಲಿ ರಾಜ್ಯ ಗೌರವಾಧ್ಯಕ್ಷರು ಸೋಮ ಗುದ್ದು ರಂಗಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ರೈತ ಹೋರಾಟಗಾರ ಹಾಗೂ ವಕೀಲರು ಪಿ.ಎಚ್.ನೀರಲಕೇರಿ, ಧಾರವಾಡ ಜಿಲ್ಲಾಧ್ಯಕ್ಷರಾದ ಶಿವಾನಂದ ಹೊಳೆಹಡಗಲಿ, ಸಿದ್ದಣ್ಣ ಕಂಬಾರ, ಅಪ್ಪೇಶ ಧಳವಾಯಿ, ಮಹಂತೇಶ ರಾವುತ್, ಶಂಕ್ರಪ್ಪ ಯಡಳ್ಳಿ, ಕಲ್ಲಪ್ಪ ಕುಗಟಿ, ಗಿರಿಯಪ್ಪ ಪರವಣ್ಣವರ, ಮಡಿವಾಳಪ್ಪ ವರಗಣ್ಣವರ, ಬಿಷ್ಟಪ್ಪ ಶಿಂಧೆ, ಅಶೋಕ ಧಳವಾಯಿ, ಮಹೇಶ ಕಾದ್ರೋಳ್ಳಿ ಇನ್ನಿತರ ಭಾಗಿಯಾಗಿದ್ದರು.