ಇನ್ನು ಕೇವಲ 30 ವರ್ಷದಲ್ಲಿ ಮಾಯವಾಗಲಿದೆ ಮುಂಬೈ

ಇನ್ನು ಕೇವಲ 30 ವರ್ಷದಲ್ಲಿ ಮಾಯವಾಗಲಿದೆ ಮುಂಬೈ
ಮುಂಬೈ: ಹವಾಮಾನ ಬದಲಾವಣೆಯಿಂದಾಗುವ ಸಮುದ್ರ ಮಟ್ಟ ಏರಿಕೆಯಿಂದ ಮುಂಬೈನ ನಾರಿಮನ್ ಪಾಯಿಂಟ್ ಸೇರಿದಂತೆ ದಕ್ಷಿಣ ಭಾಗದ ಶೇ.80ರಷ್ಟು ಭಾಗ ನೀರಿನಲ್ಲಿ ಮುಳುಗಡೆಯಾಗಿ , ಅದೃಶ್ಯವಾಗಲಿದೆ ಎಂದು ಎಚ್ಚರಿಸಲಾಗಿದೆ. ಮುಂಬೈ ಹವಾಮಾನ ಬದಲಾವಣೆ ಯೋಜನೆ ಮತ್ತು ಅದರ ವೆಬ್‍ಸೈಟ್‍ಗೆ ಚಾಲನೆ ನೀಡುವ ವೇಳೆ ಮಾತನಾಡಿರುವ ಮುಂಬೈ ಮುನ್ಸಿಪಲ್ ಕಮಿಷನರ್ ಇಕ್‍ಬಾಲ್ ಸಿಂಗ್ ಚಾಹಲ್ 2050ರ ವೇಳೆಗೆ ದಕ್ಷಿಣ ಮುಂಬೈನ ಎ, ಬಿ, ಸಿ,ಡಿ ವಾರ್ಡ್‍ಗಳು ಸಂಪೂರ್ಣವಾಗಿ ಅದೃಶ್ಯವಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಇದು ಬಹಳ ದೂರ ಇಲ್ಲ. ಕೇವಲ 25 ರಿಂದ 30 ವರ್ಷಗಳ ನಡೆಯುವ ಬೆಳವಣಿಗೆ. ಈ ಬಗ್ಗೆ ನಾವು ಹಲವಾರು ಬಾರಿ ಎಚ್ಚರಿಕೆ ನೀಡಿದ್ದೇವೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಸಮುದ್ರ ಭಾಗದ ಅಂಚಿನಲ್ಲಿರುವ ಮುಂಬೈ ಕೂಫಿ ಪೆರೆಡೇ ನಾರಿಮನ್ ಪಾಯಿಂಟ್, ಮಂತ್ರಾಲಯಗಳು ನೀರಿನಲ್ಲಿ ಮುಳುಗಡೆಯಾಗಲಿವೆ.
ಪ್ರಮುಖ ವಾಣಿಜ್ಯ ಪ್ರದೇಶಗಳಾಗಿರುವ ಈ ಭೂ ಭಾಗ ಜಾಗತಿಕ ತಾಪಮಾನದ ಬೇಗುದಿಗೆ ಸಿಲುಕಲಿವೆ. ಈಗಲೇ ಎಚ್ಚೆತ್ತುಕೊಳ್ಳದೆ ಇದ್ದರೆ ನಾವು ಮುಂದಿನ ಪೀಳಿಗೆಗೆ ಅಪಾಯಕಾರಿ ಸಂದೇಶವನ್ನು ತಂದಿಡಲಿದ್ದೇವೆ. ದಕ್ಷಿಣ ಏಷ್ಯಾದಲ್ಲಿ ಹವಾಮಾನ್ಯ ವೈಪರೀತ್ಯಕ್ಕೆ ಸಂಕಷ್ಟಕ್ಕೆ ಸಿಲುಕಿಸುವ ಮೊದಲ ನಗರ ಮುಂಬೈ ಎಂಬ ವರದಿ ಇದೆ. 129 ವರ್ಷಗಳ ಬಳಿಕ ಕಳೆದ ವರ್ಷ ಎದುರಾದ ನಿಸರ್ಗ ಸೈಕ್ಲೋನ್ ಮತ್ತು ನಂತರದ 15 ತಿಂಗಳಲ್ಲಿ ಮತ್ತೊಂದು ಅನಾಹುತ ಹೀಗೆ 2020ರಲ್ಲಿ ಮೂರ್ನಾಲ್ಕು ಚಂಡಮಾರುತಗಳಿಂದ ಸಮುದ್ರ ಮಟ್ಟ 5 ರಿಂದ ಐದೂವರೆ ಅಡಿ ಅಷ್ಟು ಹೆಚ್ಚಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಹವಾಮಾನ ಸಂಕಷ್ಟಗಳು ಎದುರಾಗುತ್ತವೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಪರಿಸರ ಮತ್ತು ಪವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ , ಹವಾಮಾನ ಇಲಾಖೆಯ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.