ಹಂಪಿಯ ಗಲ್ಲಿಗಲ್ಲಿಗೂ ದರ್ಗಾ ಮಾಡುವ ಸ್ಥಿತಿ - ಸೂಲಿಬೆಲೆ ಅಸಮಾಧಾನ

ಹಂಪಿಯ ಗಲ್ಲಿಗಲ್ಲಿಗೂ ದರ್ಗಾ ಮಾಡುವ ಸ್ಥಿತಿ - ಸೂಲಿಬೆಲೆ ಅಸಮಾಧಾನ

ಏನೂ ಇಲ್ಲದ ಜಾಗದಲ್ಲಿ ದರ್ಗಾ ಕಟ್ಟಿಕೊಂಡು, ಮುಂಬರುವ ದಿನಗಳಲ್ಲಿ ಇದು ನಮ್ಮ ದರ್ಗಾ ಎಂದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮೈಸೂರಿನ ಬಸ್ ನಿಲ್ದಾಣವೊಂದನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಿರುವ ವಿಚಾರ ಕುರಿತು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳವಾಗಿರುವ ಬಸ್ ನಿಲ್ದಾಣವನ್ನು ಪಕ್ಕಾ ಮತೀಯ ಆಕೃತಿಯಲ್ಲಿ ನಿರ್ಮಿಸಿರುವುದು ಸರಿಯಲ್ಲ. ಹಲವು ಕಡೆಗಳಲ್ಲಿ ರೈಲ್ವೆ ಸ್ಟೇಷನ್ ಗಳಲ್ಲಿಯೂ ಗೋರಿ ಹಾಕಿಕೊಂಡು ದರ್ಗಾ ನಿರ್ಮಿಸುವ ಸ್ಥಿತಿ ಇದೆ. ಹಂಪಿಯ ಗಲ್ಲಿಗಲ್ಲಿಗೂ ದರ್ಗಾ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ರೀತಿಯ ಘಟನೆಗಳು ಆಗದಂತೆ ಸಮಾಜ ಜಾಗೃತವಾಗಿರಬೇಕು ಎಂದರು.

ಬೈಟ್ - ಚಕ್ರವರ್ತಿ ಸೂಲಿಬೆಲೆ