ನಾವು ಅಧಿಕಾರಕ್ಕೆ ಬಂದ ಬಳಿಕ ಕಾಲೇಜು ಆರಂಭಿಸುತ್ತೇವೆ: ಸಿ.ಎಂ.ಇಬ್ರಾಹಿಂ

ಕಲಬುರ್ಗಿ: ಹಿಂದೂಗಳಿಗೊಂದು, ಮುಸ್ಲಿಮರಿಗಾಗಿ ಪ್ರತ್ಯೇಕವಾಗಿ ಕಾಲೇಜು ಮಾಡುತ್ತಾರಾ? ಬಿಜೆಪಿಗರ ತಲೆ ಸರಿಯಾಗಿ ಓಡುತ್ತಿಲ್ಲ. ವಕ್ಫ್ ಬೋರ್ಡ್ ನಿರ್ಧಾರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. 5 ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ. ಇವರೇನು ಕಾಲೇಜು ಆರಂಭಿಸುತ್ತಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಕಾಲೇಜು ಆರಂಭಿಸುತ್ತೇವೆ. ಎಲ್ಲಾ ವರ್ಗಗಳಿಗೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವಂತ ಕಾಲೇಜು ಆಗಿರಲಿದೆ ಎಂದಿದ್ದಾರೆ.