ವಿಮಾನದ ಒಳಗಿನ ಅತ್ಯಂತ ಕೊಳಕು ಸ್ಥಳಗಳಿವು: ರಹಸ್ಯ ಬಹಿರಂಗಪಡಿಸಿದ ಗಗನಸಖಿ

ವಿಮಾನದಲ್ಲಿ ಹಲವಾರು ರೀತಿಯ ವಸ್ತುಗಳಿದ್ದು ಅದರ ಬಗ್ಗೆ ಪ್ರಯಾಣಿಕರಿಗೆ ಹೆಚ್ಚು ತಿಳಿದಿರುವುದಿಲ್ಲ. ಕೆಲ ಮಾರ್ಗಸೂಚಿಗಳನ್ನು ಪ್ರಯಾಣಿಕರಿಗೆ ತಿಳಿಸಲಾಗುತ್ತದೆ ವಿನ: ಪ್ರಯಾಣಿಕರಿಗೆ ತಿಳಿದಿರದ ಅಥವಾ ಸಿಬ್ಬಂದಿ ಸದಸ್ಯರಿಂದ ಹೇಳಲಾಗದ ಹಲವು ವಿಷಯಗಳಿವೆ. ಬಾರ್ಬಿ ಎಂಬ ಗಗನಸಖಿ ವಿಮಾನಕ್ಕೆ ಸಂಬಂಧಿಸಿದ ಇಂತಹ ವಿಷಯಗಳ ಬಗ್ಗೆ ಹೇಳಿದ್ದಾರೆ.
35000 ಅಡಿ ಎತ್ತರದಲ್ಲಿ ಕೆಲಸ ಮಾಡುವ ಫ್ಲೈಟ್ ಅಟೆಂಡೆಂಟ್ ತನ್ನ ಕೆಲಸದ ಬಗ್ಗೆ ಕೆಲವು ತಮಾಷೆಯ ವಿಷಯಗಳನ್ನು ಹೇಳಿದ್ದಾರೆ. 'ಡೈಲಿ ಸ್ಟಾರ್'ನ ಸುದ್ದಿ ಪ್ರಕಾರ, 29 ವರ್ಷದ ಬಾರ್ಬಿ ಅರ್ಜೆಂಟೀನಾದ ಲಾ ಅಜ್ಫಾಟಾಗೆ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಾಳೆ. ಬಾರ್ಬಿ ಟಿಕ್‌ಟಾಕ್‌ನಲ್ಲಿ ತನ್ನ ಪ್ರಯಾಣದ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ ಮತ್ತು ಅವಳ ಈ ವಿಡಿಯೊಗಳು ಸಹ ವೈರಲ್ ಆಗುತ್ತವೆ