ಹೆಚ್ಚಿದ ಶೀತಗಾಳಿ; ಈ ಜಿಲ್ಲೆಗಳಲ್ಲಿ ಭಾರೀ ಚಳಿ

ಹೆಚ್ಚಿದ ಶೀತಗಾಳಿ; ಈ ಜಿಲ್ಲೆಗಳಲ್ಲಿ ಭಾರೀ ಚಳಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಕುಸಿಯುತ್ತಲೇ ಇದೆ. ಇಂದು (ಜ.14) ಕೂಡ ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉ.ಕ., ದ. ಕ.ದಲ್ಲಿ ಶೀತ ಗಾಳಿ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಕೂಡ ಚಳಿಗಾಳಿ ಹೆಚ್ಚಾಗಿದ್ದು, ಸಂಕ್ರಾತಿಗೂ ಚಳಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಬಾಗಲಕೋಟೆ, ಬೀದರ್‌, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಶೀತ ಮಾರುತಗಳು ಅಪ್ಪಳಿಸುವುದರಿಂದ ಈ ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ.