ವರುಣಾ' ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ

ವರುಣಾ' ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ

ಮೈಸೂರು : ಹೈಕಮಾಂಡ್ ಅಳೆದು ತೂಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವರುಣಾ ಕ್ಷೇತ್ರ ವ್ಯಾಪ್ತಿಯ ಬಿಳುಗಲಿ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೈಕಮಾಂಡ್ ಅಳೆದು ತೂಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದಾರೆ , ಬಾದಾಮಿ ಕ್ಷೇತ್ರ ದೂರವಾಗಿದ್ದರಿಂದ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ನಾನು ರಾಜ್ಯ ಸುತ್ತಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ, ಬಿಜೆಪಿಯವರ ಮನೆ ಹಾಳಾಗ ಬಡವರಿಗೆ ಒಂದು ಮನೆ ಕೂಡ ಕೊಡಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ, ಕೊಟ್ಟ ಭರವಸೆ ಈಡೇರಿಸದಿದ್ದರೆ ಮತ್ತೆ ಅಧಿಕಾರದಲ್ಲಿ ಇರಲ್ಲ , ಬೊಮ್ಮಾಯಿ ಧರ್ಮರಾಯನ ಥರ ಮಾತನಾಡುತ್ತಾರೆ. ಇಂಥವರಿಗೆ ಮತ್ತೆ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆರ್ ಎಸ್ ಎಸ್ ನವರು ಸಂವಿಧಾನ ಪರ ಇಲ್ಲ, ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ. ಯಡಿಯೂರಪ್ಪ ಮಗನ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ ಒಂದೊಂದು ಪೋಸ್ಟ್ ಗೆ 50 ರಿಂದ 80 ಲಕ್ಷ ವಸೂಲಿ ಮಾಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನೋಡಲೇ ಇಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ 70 ಲಕ್ಷ ಹಣ ಜಪ್ತಿ

ಬೆಳಗಾವಿ : ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 70 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ಕಾಗವಾಡ ಹೊರವಲಯದ ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರದ ಮಿರಜ್ ನಿಂದ ಬೆಳಗಾವಿಗೆ ಹಣ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇಂಡಿಕಾ ಕಾರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ 70 ಲಕ್ಷ ಹಣ ಪತ್ತೆಯಾಗಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

1.85 ಕೋಟಿ ನಗದು, 3.4 ಕೆಜಿ ಚಿನ್ನಾಭರಣ ಪತ್ತೆ

ಬೆಂಗಳೂರು : ಚುನಾವಣೆ ಹೊತ್ತಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 1.85 ಕೋಟಿ ನಗದು, 3.4 ಕೆಜಿ ಚಿನ್ನಾಭರಣ ಹಾಗೂ 36 ಕೆಜಿ ಬೆಳ್ಳಿ ಆಭರಣಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಲಸೂರು ಗೇಟ್ ಬಳಿ 35 ಲಕ್ಷ, ಎಸ್ ಜೆ ಪಾರ್ಕ್ ಬಳಿ 10 ಲಕ್ಷ, ಲಗ್ಗೆರೆಯ ಬಳಿ 1 ಕೋಟಿ, ಅಮೃತಳ್ಳಿ ಬಳಿ 30 ಲಕ್ಷ, ಬೆಂಗಳೂರು ಗಡಿ ಭಾಗದಲ್ಲಿ 10 ಲಕ್ಷ ರೂ ಹಣ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ಕೋಟ್ಯಾಂತರ ರೂ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ.ಇನ್ನೂ ಕೋರಮಂಗಲದಲ್ಲಿ536 ಸೀರೆ, 504 ಕುಕ್ಕರ್ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.