ಮಗಳ ಬರುವಿಕೆಗಾಗಿ ಕಾದು ಕುಳಿತ ಕುಟುಂಬ

ಮಗಳ ಬರುವಿಕೆಗಾಗಿ ಕಾದು ಕುಳಿತ ಕುಟುಂಬ

ಮಕ್ಕಳು ಹೊರ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದರೆ ಪಾಲಕರಿಗೊಂದು ಪ್ರತಿಷ್ಠೆ. ಆದರೆ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿರುವ ಮಕ್ಕಳ ಬಗ್ಗೆಯೇ ಈಗ ಪಾಲಕರಲ್ಲಿ ಆತಂಕ ಎದುರಾಗಿದೆ. ಮಕ್ಕಳ ಸ್ಥಿತಿ ಕಂಡು ಪಾಲಕರು  ಆತಂಕಕ್ಕೆ ಒಳಗಾಗಿದ್ದಾರೆ.‌ 

ಹೀಗೆ ಕಣ್ಣೀರು ಹಾಕುತ್ತಿರುವ ಈ ತಾಯಿಯ ಸುನಂದಾ. ಮಂಟೂರಿನಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಈ ತಾಯಿ ತನ್ನ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳಿಸಿದ್ದಾಳೆ. ಆದರೆ ವಿದೇಶಕ್ಕೆ ಕಳಿಸಿ ಈಗ ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾಳೆ. ಹೌದು‌‌. ಉಕ್ರೇನ್ ನಲ್ಲಿ ಯುದ್ಧ ಘೋಷಣೆಯಾದ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಆತಂಕ ಮನೆ ಮಾಡಿದೆ. ಉಕ್ರೇನ್ ನಲ್ಲಿ ಧಾರವಾಡದ ಮೆಡಿಕಲ್ ವಿದ್ಯಾರ್ಥಿನಿ ಚೈತ್ರಾ ಎಂಬುವವರು ಸಿಲುಕಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ವಿದೇಶಾಂಗ ಸಚಿವಾಲಯ ಸಾಕಷ್ಟು ಕಾರ್ಯಾಚರಣೆ ನಡೆಸಿದೆ. ಆದರೆ ಮಗಳು ಇರುವ ದೇಶದಲ್ಲಿ ಯುದ್ಧ ಘೋಷಣೆ ಆಗಿದ್ದು, ಈಗ ಮಗಳ ಸ್ಥಿತಿ ನೆನೆದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಇನ್ನೂ ಚೈತ್ರಾ ಸಂಶಿ ಮೆಡಿಕಲ್ ವ್ಯಾಸಂಗದಲ್ಲಿರುವ ಕನ್ನಡತಿಯಾಗಿದ್ದು, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದವರು. ಬೆಳಗಿನ ಜಾವ 05 ಗಂಟೆ ಸುಮಾರು ತಾಯಿಗೆ ಕರೆ ಮಾಡಿದ್ದ ಚೈತ್ರಾ. ಹಾಸ್ಟೆಲ್ ದೂರದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಕರೆ ಮಾಡಿದ್ದಳು. ಮಗಳು ಆತಂಕದಲ್ಲಿರುವ ಸುದ್ದಿಕೇಳಿ ಕುಟುಂಬ ಕಣ್ಣೀರು ಹಾಕಿದೆ. ತಾಯಿ ಸುನಂದಾ ಶಾಲಾ ಶಿಕ್ಷಕಿಯಾಗಿದ್ದು, ಒಬ್ಬಳೇ ಮಗಳನ್ನು ವಿದೇಶಕ್ಕೆ ಕಳುಹಿಸಿ ಕಣ್ಣೀರು ಹಾಕುತ್ತಿದ್ದಾರೆ.

ಇನ್ನೂ ಮೂರು ವರ್ಷದಿಂದ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ತೆರಳಿರುವ ಚೈತ್ರಾನ ಆಗಮನಕ್ಕೆ ಕುಟುಂಬ ಮಾತ್ರವಲ್ಲದೆ ಜಿಲ್ಲೆಯೇ ಎದುರು ನೋಡುತ್ತಿದೆ. ತಮ್ಮ ಮಗಳ ಯೋಗ ಕ್ಷೇಮ ವಿಚಾರಿಸುವ ಮೂಲಕ ಮಗಳಿಗೆ ತಾಯಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.