ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಡಾಲಿ
ಧನಂಜಯ್ ನಿರ್ಮಾಣದಲ್ಲಿ ಟಗರು ಪಲ್ಯಾ ಚಿತ್ರ ಬರಲಿದ್ದು, ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಇದನ್ನು ನೆಪೋಟಿಸಂ ಎಂದಿರುವ ನೆಟ್ಟಿಗರು, ಬಡವರ ಮಕ್ಕಳು ಬೆಳಿಬೇಕು ಸರ್, ಒಬ್ಬ ಬಡವರ ಮಕ್ಕಳಿಗೆ ಅವಕಾಶ ಕೊಡಬಹುದಿತ್ತಲ್ಲ ನೀವು' ಎಂದು ಕೇಳಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಡಾಲಿ 'ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ' ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.