ಸೀತಾ ಮಾತೆಯಾಗಿ ಬಾಲಿವುಡ್‌ಗೆ ಸಾಯಿ ಪಲ್ಲವಿ ಎಂಟ್ರಿ!
ಗ್ಲಾಮರ್‌ನಿಂದ ದೂರವೇ ಉಳಿದಿರುವ ಸಾಯಿ ಪಲ್ಲವಿ ನಟನೆಗೆ ಅವಕಾಶ ಇರುವಂತಹ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ. ಈಗ ರಾಮಾಯಣ ಕಾವ್ಯ ಆಧರಿಸಿ ನಿರ್ಮಾಣವಾಗುವ ಬಾಲಿವುಡ್ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸ್ತಾರೆ ಎನ್ನಲಾಗ್ತಿದೆ. ಬಾಲಿವುಡ್ ಚಿತ್ರ ನಿರ್ಮಾಪಕ ಮಧು ಮಂತೇನಾ ರಾಮಾಯಣ ಕಾವ್ಯವನ್ನು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತಾಮಾತೆ ಪಾತ್ರ ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗ್ತಿದೆ.