ಶಾರುಖ್ ರ ಸೂಪರ್ ಹಿಟ್ ಚಿತ್ರವೊಂದರ ಸೀನ್ ನಲ್ಲಿನ ಪ್ರಮಾದ ಈಗ ಬಹಿರಂಗ
2003ರ ಸೂಪರ್ ಹಿಟ್ ಚಿತ್ರವಾದ 'ಕಲ್ ಹೋ ನ ಹೋ'ದ ದೃಶ್ಯವೊಂದು ಇದೇ ಕಾರಣಕ್ಕೆ ಈಗ ಸದ್ದು ಮಾಡುತ್ತಿದೆ.
ಚಿತ್ರದ ಅಮನ್ ಪಾತ್ರಧಾರಿ ಶಾರುಖ್ ಖಾನ್, ನೈನಾಳ ಡೈರಿಯೊಂದನ್ನು ನಿಂತುಕೊಂಡು ಓದುತ್ತಿದ್ದಾರೆ. ಆದರೆ ಕ್ಯಾಮೆರಾವನ್ನು ಡೈರಿ ಮೇಲೆ ಎಳೆದಾಗ, ಡೈರಿಯು ತೊಡೆಯ ಮೇಲೆ ಇರುವಂತೆ ಕಾಣುತ್ತಿದೆ.
"ಈ ದೃಶ್ಯದಲ್ಲಿ ಎಸ್.ಆರ್.ಕೆ ಅದೆಷ್ಟು ಚೆನ್ನಾಗಿ ನಟಿಸಿದ್ದಾರೆಂದರೆ, ಡೈರಿಯ ಕ್ಲೋಸಪ್‌ನಲ್ಲಿ ಉಂಟಾದ ಪ್ರಮಾದವನ್ನು ಯಾರೂ ಗಮನಿಸಿಲ್ಲ. ಪಾತ್ರಧಾರಿ ನಿಂತುಕೊಂಡಿದ್ದರೂ ಸಹ ಡೈರಿಯನ್ನು ಯಾರೋ ಒಬ್ಬರ ತೊಡೆ ಮೇಲೆ ಇಡಲಾಗಿದೆ" ಎಂದು ಪುಲ್ಕಿತ್ ಕೊಚ್ಚರ್ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಿಮಿಷಗಳಲ್ಲಿ ನೆಟ್ಟಿಗರಿಂದ ಈ ಸ್ಕ್ರೀನ್‌ಶಾಟ್‌ಗೆ ಭಾರೀ ಪ್ರತಿಕ್ರಿಯೆಗಳು ಕಂಡು ಬಂದಿವೆ.