ಬೆಳ್ಳಿತೆರೆ ಮೇಲೆ ಸೆಂಚುರಿ ಭಾರಿಸಿದ ರಿಷಬ್ 'ಕಾಂತಾರ'
ಕನ್ನಡಿಗರ ಹೆಮ್ಮೆಯ 'ಕಾಂತಾರ' ಸಿನಿಮಾದ ದಾಖಲೆ ಸಧ್ಯಕ್ಕೆ ಯಾರು ಮುರಿಯೋಕೆ ಆಗೋದಿಲ್ಲ. ದಾಖಲೆ ಮಾಡುತ್ತಲೇ ಕನ್ನಡದ ಹೆಸರನ್ನು ವಿಶ್ವದೆಲ್ಲೆಡೆ ತೆಗೆದುಕೊಂಡು ಹೋಗಿದೆ ಈ ಸಿನಿಮಾ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ರಿಲೀಸ್ ಆದ ಮರು ದಿನದಿಂದಲೇ ಕಾಂತಾರ ಹೊಸ ಅಲೆಯನ್ನೇ ಎಬ್ಬಿಸಿತ್ತು. 15ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ 450 ಕೋಟಿಗೂ ಹೆಚ್ಚು ಕಲೆಕ್ಷನ್ ಆಯ್ತು. ಸಿನಿಮಾ ಇದೀಗ 100 ದಿನ ಪೂರೈಸಿ ಸಂಭ್ರಮಿಸುತ್ತಿದೆ.