ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ವರಲಕ್ಷ್ಮಿ ಜೊತೆ ಕಾಲ ಕಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್..!

ಬಹುಭಾಷಾ ನಟ ಶರತ್ ಕುಮಾರ್ ಅವರ ಮಗಳು ಹಾಗೂ ನಟಿ ವರಲಕ್ಷಿ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಹಾಗೂ ಅವರ ಮಗಳು ಆರಾಧ್ಯಾ ಜೊತೆ ಕೆಲ ಸಮಯ ಕಳೆದಿದ್ದಾರೆ.
ಈ ಸೆಲೆಬ್ರಿಟಿಗಳ ಭೇಟಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮಣಿರತ್ನಂ ನಿರ್ದೇಶನದ ಸಿನಿಮಾ ಪೊನ್ನಿಯಿನ್ ಸೆಲ್ವನ್ ಚಿತ್ರೀಕರಣ ಪಾಂಡಿಚೆರಿಯಲ್ಲಿ ಆರಂಭವಾಗಿದೆ. ಈ ಚಿತ್ರೀಕರಣದಲ್ಲಿ ಐಶ್ವರ್ಯಾ ಭಾಗಿಯಾಗಿದ್ದಾರೆ.
ಇದೇ ಸಿನಿಮಾದಲ್ಲಿ ವರಲಕ್ಷ್ಮಿ ಅವರ ತಂದೆ ಶರತ್ ಕುಮಾರ್ ಅವರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ವರಲಕ್ಷ್ಮಿ ಹಾಗೂ ಅವರ ಸಹೋದರಗಿ ಪೂಜಾ ಬಚ್ಚನ್ ಕುಟುಂಬದ ಕುಡಿ ಹಾಗೂ ಐಶ್ವರ್ಯಾ-ಅಭಿಷೇಕ್ ಜತೆ ಕಾಲ ಕಳೆದಿದ್ದಾರೆ.

ಇನ್ನು ವರಲಕ್ಷ್ಮಿ ಅವರ ಸಹೋದರಿಗೆ ಇನ್ನೂ ಐಶ್ವರ್ಯಾ ರೈ ಅವರ ಜತೆ ಕಾಲ ಕಳೆದಿರುವ ಬಗ್ಗೆ ನಂಬಿಕೆಯೇ ಬರುತ್ತಿಲ್ಲವಂತೆ. ಹೀಗೆಂದು ವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬದ ಜೊತೆ ಐಶ್ವರ್ಯಾ ರೈ

ಕುಟುಂಬದ ಜೊತೆ ಐಶ್ವರ್ಯಾ ರೈ
